ರೈತರೊಬ್ಬರ ಲಾಕಪ್ ಡೆತ್: 9 ಮಂದಿ ಪೊಲೀಸರಿಗೆ ಬಂಧನದ ಭೀತಿ!

# farmer  #Lockup death # Police

11-09-2018

ಬೆಂಗಳೂರು: ನ್ಯಾಯಾಲಯದ ವಾರೆಂಟ್ ಹಿಡಿದು ಬಂಧಿಸಲು ಹೋದಾಗ ಪೊಲೀಸ್ ಬೈಕ್‍ಗೆ ಬೆಂಕಿ ಹಚ್ಚಿದ ರೈತನೋರ್ವ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ವಶದಲ್ಲಿದ್ದಾಗ ಲಾಕಪ್ ಡೆತ್ ಆಗಿದ್ದ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರಿಗೆ ಬಂಧನ ಭೀತಿ ಎದುರಾಗಿದೆ.

ಮೈಸೂರಿನ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಗಳ ಹಿಂದೆ ಲಾಕಪ್ ಡೆತ್ ನಡೆದಿದ್ದ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು ಪೊಲೀಸರು ತಪ್ಪಿತಸ್ಥರಾಗಿರುವ ಆರೋಪಟ್ಟಿ ಸಿದ್ದಪಡಿಸಿದ್ದು ಅದರಲ್ಲಿ ಪೊಲೀಸರೇ ತಪ್ಪಿತಸ್ಥರಾಗಿರುವುದು ಪತ್ತೆಯಾಗಿದೆ.

ಮೂರು ವರ್ಷಗಳ ಹಿಂದೆ ಹುಣಸೂರು ಗ್ರಾಮಾಂತರ ಪೊಲೀಸರು ಬಂಧನ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ರೈತ ದೇವರಾಜನನ್ನು ಬಂಧಿಸಲು ಹೋದಾಗ ಆಕ್ರೋಶಗೊಂಡ ದೇವರಾಜು ಪೊಲೀಸರ ಬೈಕಿಗೆ ಬೆಂಕಿ ಹಚ್ಚಿದ್ದನು. ಕೂಡಲೇ ಆತನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದು ಸಬ್ ಇನ್ಸ್ಪೆಕ್ಟರ್ ಲೋಕೇಶ್, ಪಿಸಿಗಳಾದ ಸತೀಶ್, ಆನಂದ್ ಸೇರಿದಂತೆ 9 ಜನ ಹಲ್ಲೆ ಮಾಡಿದ್ದರು. ಅಸ್ವಸ್ಥಗೊಂಡ ದೇವರಾಜುನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದ್ಯೊಯ್ಯುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದನು.

ದೇವರಾಜುನನ್ನು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ಹೊಡೆದು ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಆದರೆ, ಸಬ್ ಇನ್ಸ್ಪೆಕ್ಟರ್ ಲೋಕೇಶ್ ನಕಲಿ ವೈದ್ಯ ಪ್ರಮಾಣ ಪತ್ರವನ್ನು ತಯಾರಿಸಿ ನೀಡಿದ್ದ ಸಹಜ ಸಾವು ಎಂಬ ವೈದ್ಯಕೀಯ ಪ್ರಮಾಣ ನೋಡಿದ್ದ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಸದ್ಯ ಇದೀಗ ಎಲ್ಲ ಸತ್ಯಾಂಶ ಬಯಲಾಗಿದ್ದು, 9 ಜನ ಪೊಲೀಸರ ಮೇಲೆ ಬಂಧನದ ತೂಗುಗತ್ತಿ ತೂಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

warrant Lockup death ಸತ್ಯಾಂಶ ಸಿಐಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ