ಕಾಂಗ್ರೆಸ್ ಮುಕ್ತ ಭಾರತ ಆಗೋದು ಗ್ಯಾರಂಟಿ !

Kannada News

02-06-2017

ಬೆಂಗಳೂರು:-ಕಾಂಗ್ರೆಸ್  ಪಕ್ಷವನ್ನು  ಮುಗಿಸೋದೆ ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್ ಮುಕ್ತ ಭಾರತ ಆಗೋದು ಗ್ಯಾರಂಟಿ. ಮೈಕ್ರೋ ಸ್ಕೋಪ್ ಹಿಡಿದುಕೊಂಡು ಕಾಂಗ್ರೆಸ್ ಎಲ್ಲಿದೆ ಅಂತ ಹುಡುಕಬೇಕು. ಕರ್ನಾಟಕದಲ್ಲಿ ಮಾತ್ರ ಒಂದು ಇದೆ. ಅದನ್ನೂ ಇವರು ಎಳೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಕಾಂಗ್ರೆಸ್ ಮುಗಿಸೋದು ನಾನೇ ಅಂತ. ಸಿದ್ದರಾಮಯ್ಯ ಅವರೆ ಕಾಂಗ್ರೆಸ್ ಪಕ್ಷ ಮುಗಿಸಿ ಹೋಗ್ತಾರೆ ಎಂದು ಡಿ.ವಿ ಸದಾನಂದ ಗೌಡ ಹೇಳಿದ್ದಾರೆ. ವಿಧಾನ ಪರಿಷತ್ ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ‌ ವಿಚಾರದ ಬಗ್ಗೆ ಮಾತನಾಡಿದ ಅವರು , ಕಾಂಗ್ರೆಸ್ ನವರಿಗೆ ಎಲ್ಲ ಕಳೆದುಕೊಳ್ಳುತ್ತಿದ್ದೀವಿ ಅಂತ ಅನ್ನಿಸುತ್ತಿದೆ. ಹೀಗಾಗಿ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಶಂಕರ್ ಮೂರ್ತಿ ನಡವಳಿಗೆ ಬಗ್ಗೆ ಕಾಂಗ್ರೆಸ್ ನವರು ಕೂಡಾ ವಿರೋಧ ಮಾಡಿಲ್ಲ. ಅಧಿಕಾರಕ್ಕಾಗಿ,  ಯಶಸ್ವಿಯಾಗಿ ನಡೆಯುತ್ತಿರುವ ಪರಿಷತ್ ಕಲಾಪವನ್ನ ತಾವು ಹೇಳಿದಂತೆ ನಡೆಬೇಕು ಅಂತ ಮಾಡಲು ಹೀಗೆ ಮಾಡುತ್ತಿದ್ದಾರೆ. ನಾವು ಪ್ರಜಾತಂತ್ರದ ವಿರೋಧಿಗಳಲ್ಲ.ಆದರೆ ಇಂತಹ ಕಾಂಗ್ರೆಸ್ ನಡೆ ಸರಿಯಲ್ಲ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ