ದುರ್ನಡತೆಗೆ ಹೆಸರಾಗುತ್ತಿರುವ ಸೆರೆನಾ!

#serena williams  #U.S.Open # catsuit

11-09-2018

ಅಗ್ರ ಶ್ರೇಯಾಂಕ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಮಗುವಿಗೆ ಜನ್ಮ ನೀಡಿದ ನಂತರ ಯು.ಎಸ್. ಓಪನ್ ಪಂದ್ಯಾವಳಿಯಲ್ಲಿ ಸ್ಪರ್ಥಿಸಿ ಸೋಲನ್ನು ಅನುಭವಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಆರಂಭದಿಂದಲೂ ವಿವಾದಗಳನ್ನು ಮೈಗಂಟಿಸಿಕೊಂಡ ಸೆರೆನಾ ಕ್ಯಾಟ್ ಸೂಟ್ ಧರಿಸಿ ಪಂದ್ಯದ ಮೇಲ್ವಿಚಾರಕರ ಕೆಂಗಣ್ಣಿಗೆ ಗುರಿಯಾಗಿದ್ದೂ ಅಲ್ಲದೆ, ಆ ನಂತರ ಪಂದ್ಯದಲ್ಲಿ ಅಂಪೈರ್ ಗೆ ಬೈದು ಸಿಟ್ಟು ವ್ಯಕ್ತಪಡಿಸಿ ಪಂದ್ಯದ ಮಧ್ಯದಲ್ಲೇ ಕೋಚ್ ನಿಂದ ತರಬೇತಿ ಪಡೆದು, ಹಾಗೇ ತನ್ನ ರ‍್ಯಾಕೆಟ್ ಅನ್ನು ನೆಲಕ್ಕೆ ಅಪ್ಪಳಿಸಿ ಕೆಟ್ಟ ನಡವಳಿಕೆ ಪ್ರದರ್ಶಿಸಿದ್ದಾರೆ.

ತಾನು ಸನ್ನಡತೆಯುಳ್ಳ ಸಭ್ಯ ಆಟಗಾರ್ತಿ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುವ ಸೆರೆನಾ ತಾವೊಬ್ಬ ಸ್ತ್ರೀವಾದಿ ಎಂದು ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ. ಆದರೆ, ಇತರ ಮಹಿಳಾ ಟೆನ್ನಿಸ್ ಆಟಗಾರ್ತಿಯರನ್ನು ಕೆಟ್ಟದಾಗಿ ನೆಡೆಸಿಕೊಳ್ಳುವ ಸೆರೆನಾ ಮಹಿಳಾ ಅಂಪೈರ್ ಗಳೊಂದಿಗೆ ಜಗಳಕ್ಕಿಳಿದು ಅವರನ್ನು ಅವಮಾನಿಸುವುದು ಹೊಸತೇನಲ್ಲ. ಇದನ್ನು ಮುಂದಿಟ್ಟುಕೊಂಡು ಸೆರೆನಾ ಯಾವ ರೀತಿಯಲ್ಲಿ ಒಬ್ಬ ಸ್ತ್ರೀವಾದಿ ಎಂದು ಅವರನ್ನು ಟೀಕಿಸುವವರು ಕೇಳುತ್ತಿದ್ದಾರೆ.

ಇವರ ನಡವಳಿಕೆ ಹೀಗೇ ಮುಂದುವರೆದರೆ ಮುಂದೊಂದು ದಿನ ಬಹಳಷ್ಟು ಅಪಖ್ಯಾತಿಗೆ ಗುರಿಯಾಗಿ ಜನಪ್ರಿಯತೆಯನ್ನು ಕಳೆದುಕೊಳ್ಳಬಹುದು ಎಂದು ಅವರ ಅಭಿಮಾನಿಗಳೂ ಹೇಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#serena williams #catsuit ನಡವಳಿಕೆ ಅವಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ