‘ಕಾಂಗ್ರೆಸ್ ಅನ್ನು ಮುಳುಗಿಸುವುದು ಅಷ್ಟು ಸುಲಭವಲ್ಲ’

#S.R.Patil  #jarkiholi brothers #KPCC

11-09-2018

ವಿಜಯಪುರ: 'ಸತೀಶ ಜಾರಕಿಹೊಳಿ ಹಾಗು ರಮೇಶ ಜಾರಕಿಹೋಳಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿದ್ದಾರೆ, ಅವರಲ್ಲಿ ಯಾವುದೇ ಗೊಂದಲ ಇಲ್ಲ' ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು ‘ಜಾರಕಿಹೊಳಿ ಸಹೋದರರು ಎಂದೂ ಕೂಡ ಮತ್ತೊಂದು ‌ಪಕ್ಷಕ್ಕೆ ಹೋಗುವ ವಿಚಾರವನ್ನು ಕನಸು ಮನಸಲ್ಲೂ ಮಾಡಿಲ್ಲ. ಶ್ರೀರಾಮುಲು ಬೇರೆ ಕಾರಣಕ್ಕೆ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು, ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ' ಎಂದಿದ್ದಾರೆ.

'ಆರು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರಿ ನಡೆಸಿದೆ. ಆದರೆ, ಒಮ್ಮೆಯೂ ಇಡಿ, ಐಟಿ ಹಾಗೂ ಸಿಬಿಐಯನ್ನು ದುರುಪಯೋಗ ಪಡೆಸಿಕೊಂಡಿಲ್ಲ. ಕಾಂಗ್ರೆಸ್ ಅನ್ನು ಮುಳುಗಿಸುವುದು ಅಷ್ಟೊಂದು ಸುಲಭವಲ್ಲ. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನೇಣು ಕಂಬಕ್ಕೆ‌ ತಲೆ‌ ಒಡ್ಡಿದವರು ನಾವು. ಪ್ರಧಾನಿ ಮೋದಿ ಅವರ ಇಡಿ, ಐಟಿಗೆ ಕಾಂಗ್ರೆಸ್ ನವರು ಹೆದರುವವರಲ್ಲ' ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕಿಂಚಿತ್ತು ಅಪಾಯವಿಲ್ಲ 5 ವರ್ಷ ಸಂಪೂರ್ಣ ಅವಧಿ ಪೂರೈಸಲಿದೆ ಎಂದೂ ಕೂಡ ಹೇಳಿದ್ದಾರೆ ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಎಸ್.ಆರ್.ಪಾಟೀಲ್.


ಸಂಬಂಧಿತ ಟ್ಯಾಗ್ಗಳು

S.R.Patil jarkiholi brothers ಸಿಬಿಐ ಗೊಂದಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ