ನಕಲಿ ವೈದ್ಯನಿಂದ ಸರ್ಕಾರಕ್ಕೆ ವಂಚನೆ!

# District health officer # fake documents

11-09-2018

ಗದಗ: ಪ್ರತಿ ತಿಂಗಳಿಗೆ 46000ರೂ.ಗಳಂತೆ ಸರ್ಕಾರಕ್ಕೆ ನಕಲಿ ವೈದ್ಯರೊಬ್ಬರು ನಾಮ ಹಾಕಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಜಿಲ್ಲೆಯ ಲಕ್ಷ್ಮೇಶ್ವರ ಆಸ್ಪತ್ರೆ ಹಾಗೂ ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಕಲಿ ವೈದ್ಯ ಡಾ.ವಿಕಾಸ ಪಾಟೀಲ್ ಹೆಸರಲ್ಲಿ ನಕಲಿ ಪ್ರಮಾಣ ಪತ್ರ ಸೃಷ್ಟಿ ಮಾಡಿ ವಂಚಿಸುತ್ತಿರುವುದು ತಿಳಿದು ಬಂದಿದೆ. ಬೆಳಗಾವಿ ಮೂಲದ ಡಾ.ವಿಕಾಸ್ ಪಾಟೀಲ್ ಅವರ ಪ್ರಮಾಣ ಪತ್ರ ನಕಲು ಮಾಡಿರುವುದಾಗಿಯೂ, ಸುಳ್ಳು ದಾಖಲೆ ಕೊಟ್ಟು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಈ ಕುರಿತು ಡಾ.ವಿಕಾಸ್ ಪಾಟೀಲ್ ತಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಕಲಿ ವೈದ್ಯನ ಅಸಲಿ ಹೆಸರು ಊರಿನ ಬಗ್ಗೆ ಮಾಹಿತಿಯೇ ಇಲ್ಲದಾಗಿದ್ದು. ಈ ಹಿಂದೆ ಡಿಎಚ್ಓ ಆಗಿದ್ದ ಡಾ.ಪಿ.ಎಚ್.ಕಬಾಡಿ ಅವರ ಅವಧಿಯಲ್ಲಿ ಈ ವೈದ್ಯನ ನೇಮಕವಾಗಿದೆ ಎನ್ನಲಾಗಿದೆ. ಪ್ರಮಾಣ ಪತ್ರ ಪರಿಶೀಲಿಸದೇ ವೈದ್ಯನ ನೇಮಕ ಹೇಗೆ? ಎಂದು ಡಾ.ವಿಕಾಸ್ ಪಾಟೀಲ್ ತಂದೆ ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

DHO Officer ನಕಲಿ ವೈದ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ