ವೈದ್ಯನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ವೈದ್ಯ ಪರಾರಿ

#Doctor # treatment

11-09-2018

ಹಾವೇರಿ: ವೈದ್ಯನ ನಿರ್ಲಕ್ಷ್ಯಕ್ಕೆ ಬಾಲಕನೊಬ್ಬ ಬಲಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ಹೊಸಳ್ಳಿಯಲ್ಲಿ ನಡೆದಿದೆ. ಹರೀಶ್ ಬಸವಣೆಪ್ಪಾ ದುರ್ಗನ್ನವರ (13) ಮೃತ ದುರ್ದೈವಿ. ಪರಮೇಶ ಎಂಬ ಖಾಸಗಿ ವೈದ್ಯನ ನಿರ್ಲಕ್ಷ್ಯದಿಂದಾಗಿ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಜ್ವರ ಬಂದಿರುವುದಾಗಿ ಪರಮೇಶ ವೈದ್ಯನ ಬಳಿ ಬಂದಿದ್ದರು, ಅಲ್ಲೇ ಅವರ ಆಸ್ಪತ್ರೆಯಲ್ಲೇ ಬಾಲಕನಿಗೆ ಇಂಜೆಕ್ಷನ್ ನೀಡಿದ್ದರು ಡಾಕ್ಟರ್. ಇಂಜೆಕ್ಷನ್ ನೀಡಿದ ನಂತರ ಬಾಲಕನ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿತ್ತು. ನಂತರದಲ್ಲಿ ಬಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ಬಾಲಕ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ವೈದ್ಯ ಪರಮೇಶನ ತಪ್ಪಾದ ಚಿಕಿತ್ಸಾ ಕ್ರಮದಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ವೈದ್ಯ ಪರಮೇಶ ಗ್ರಾಮದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Doctor Hospital ವೈದ್ಯಾಧಿಕಾರಿ ಬಾಲಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ