ಭಾರತ್ ಬಂದ್: ಬಾಗಲಕೋಟೆಯಲ್ಲಿ ವಿನೂತನ ಪ್ರತಿಭಟನೆ

#Bandh  #bullock cart

10-09-2018

ಬಾಗಲಕೋಟೆ: ತೈಲ ಬೆಲೆ ಏರಿಕೆ ಖಂಡಿಸಿ ಭಾರತ ಬಂದ್ ಹಿನ್ನೆಲೆ, ಬಾಗಲಕೋಟೆಯಲ್ಲಿ ಜಯಕರ್ನಾಟಕ ಸಂಘಟನೆ ವಿನೂತನ ಪ್ರತಿಭಟನೆ ನಡೆಸಿದೆ. ಬಸವೇಶ್ವರ ವೃತ್ತದಲ್ಲಿ ಟಾಂಗಾ ಗಾಡಿಗೆ ಅಟೊ ಕಟ್ಟಿ ಎಳೆಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಆರ್.ಡಿ ಬಾಬು ಟಾಂಗಾ ಓಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂನಿಯರ್ ಉಪೇಂದ್ರ ಎಂದೇ ಕರೆಸಿಕೊಳ್ಳುವ ಆರ್.ಡಿ.ಬಾಬು ಟಾಂಗಾಗೆ ಅಟೊ ಕಟ್ಟಿ ಓಡಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

bullock cart Protest ಟಾಂಗಾ ಅಟೊ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ