ಪ್ರಧಾನಿಗೆ ಡಾಮ್ ಮೊರೇಸ್ ಪುಸ್ತಕ ಉಡುಗೊರೆ

#dam moraes #Narendra modi

10-09-2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಇಂದು ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಖ್ಯಾತ ಪ್ರವಾಸಿ ಲೇಖಕ ಡಾಮ್   ಮೊರೇಸ್ ಅವರು ಬರೆದ “ದಿ ಓಪನ್ ಐಸ್:ಎ ಜರ್ನಿ ಥ್ರೂ ಕರ್ನಾಟಕ” ಎಂಬ ವಿಶಿಷ್ಟ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಕರ್ನಾಟಕ ಸರ್ಕಾರದ ಪರವಾಗಿ ವಾರ್ತಾ ಇಲಾಖೆಯು ಈ ಪುಸ್ತಕವನ್ನು 1976ರಲ್ಲಿ ಪ್ರಕಟಿಸಿತ್ತು. ಇದರ ಲೇಖಕ ಡಾಮ್ ಮೊರೇಸ್ ಭಾರತದ ಪ್ರತಿಭಾನ್ವಿತ ಕವಿ, ಅಂಕಣಕಾರ ಹಾಗೂ ಪ್ರವಾಸಿ ಲೇಖಕರಾಗಿದ್ದರು. ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಈ ಕೃತಿಗೆ ಅಂತರರಾಷ್ಟ್ರೀಯ ಮಟ್ಟದ ವ್ಯಂಗ್ಯ ಚಿತ್ರಕಾರ ಹಾಗೂ ಚಿತ್ರ ಕಲಾವಿದ ಪದ್ಮಭೂಷಣ ಮಾರಿಯೋ ಮಿರಾಂಡ ಅವರು ಚಿತ್ರಗಳನ್ನು ಒದಗಿಸಿದ್ದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ