ಮತ್ತೊಮ್ಮೆ ಹುಚ್ಚ ವೆಂಕಟ್ ನ ಹುಚ್ಚಾಟ

# Huccha Venkat # assaulted

07-09-2018

ಬೆಂಗಳೂರು: ಉಲ್ಲಾಳದ ಬಳಿ ಕುಡಿದು ರಂಪಾಟ ಮಾಡಿದ್ದ ಹುಚ್ಚ ವೆಂಕಟ್ ಪೊಲೀಸರ ವಿರುದ್ಧವೇ ನಗರ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.

ನಗರದ ಯಾವ ಪೊಲೀಸ್ ಠಾಣೆಯಲ್ಲಿ ನನ್ನ ದೂರು ತೆಗೆದುಕೊಳ್ಳುತ್ತಿಲ್ಲ, ಹಾಗಾಗಿ ಕಮಿಷನರ್‍ಗೆ ದೂರು ನೀಡಲು ಬಂದಿರುವುದಾಗಿ ಹುಚ್ಚ ವೆಂಕಟ್ ತಿಳಿಸಿದ್ದಾನೆ. ಯಾರ ವಿರುದ್ಧ ದೂರು ನೀಡಲು ಮುಂದಾಗಿದ್ದೀರಾ ಎಂದು ಪ್ರಶ್ನಿಸಿದ್ದಾಗ ವೆಂಕಟ್ ಸರಿಯಾದ ಉತ್ತರ ನೀಡುತ್ತಿಲ್ಲ. ನಡು ರಸ್ತೆಯಲ್ಲಿ ಹುಚ್ಚ ವೆಂಕಟ್ ಕುಡಿದು ತೂರಾಡುತ್ತಿದ್ದು, ಇವನ ರಂಪಾಟವನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದರು.

ನಗರದ ಉಲ್ಲಾಳದ ಅಂಗಡಿ ಬಳಿ ನಿಂತಿದ್ದ ಜನರ ಮೇಲೆ ಗುರುವಾರ ಬೆಳಿಗ್ಗೆ ಏಕಾಏಕಿ ಹುಚ್ಚ ವೆಂಕಟ್ ಹಲ್ಲೆ ನಡೆಸಿದ್ದ. ಬುಧವಾರ ರಸ್ತೆಯಲ್ಲಿ ಕುಡಿದು ತೂರಾಡುವ ಮೂಲಕ ಸುದ್ದಿಯಾಗಿದ್ದ ಹುಚ್ಚ ವೆಂಕಟ್ ಗುರುವಾರ ಅಂಗಡಿ ಬಳಿ ನಿಂತಿದ್ದವರ ಮೇಲೆ ಹಲ್ಲೆ ನಡೆಸಿ ಮತ್ತೊಮ್ಮೆ ತನ್ನ ಹುಚ್ಚಾಟ ಮುಂದುವರಿಸಿದನು.

ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಹುಚ್ಚ ವೆಂಕಟ್ ಉಲ್ಲಾಳದ ಬೇಕರಿ ಬಳಿ ಬಂದು ಟೀ ಕೊಡುವ ಯುವಕನ ಮುಖಕ್ಕೆ ಬಿಸಿ ಟೀ ಎರಚಿದ್ದು ಅಲ್ಲದೇ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ನಡೆಸಿದನು. ಈ ವೇಳೆ ತಡೆಯಲು ಬಂದ ಇಬ್ಬರು ಯುವಕರ ಮೇಲೆಯೂ ಹಲ್ಲೆ ನಡೆಸಿದ್ದು, ಸದ್ಯ ಹಲ್ಲೆಗೊಳಗಾದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದರು.

ವೆಂಕಟ್ ಮೈಮೇಲಿನ ಬಟ್ಟೆ ಕೊಳೆ ಮಾಡಿಕೊಂಡು ಥೇಟ್ ಕುಡುಕರಂತೆ ವರ್ತಿಸುತ್ತಿದ್ದನು. ಬಳಿಕ ರಾಜರಾಜೇಶ್ವರಿನಗರ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು ಎನ್‍ಸಿಆರ್ ದಾಖಲಿಸಿದರು. ಎನ್‍ಸಿಆರ್ ದಾಖಲಿಸಿದ ಬಳಿಕ ಪೊಲೀಸರು ಎಚ್ಚರಿಕೆ ಕೊಟ್ಟು ವೆಂಕಟ್‍ನನ್ನು ಬಿಟ್ಟು ಕಳಿಸಿದರು. ಆದರೆ ಈಗ ಕಮಿಷನರ್ ಕಚೇರಿಗೆ ದೂರು ನೀಡಲು ಬಂದಿರುವುದಾಗಿ ಹುಚ್ಚ ವೆಂಕಟ್ ಹೇಳುತ್ತಿದ್ದಾನೆ.


ಸಂಬಂಧಿತ ಟ್ಯಾಗ್ಗಳು

Huccha Venkat Bakery ಕಮಿಷನರ್ ರಂಪಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ