ಕಿಡ್ನಾಪ್ ಪ್ರಕರಣ: ಬಯಲಾಯ್ತು ಯುವತಿ ಹೈಡ್ರಾಮಾ

# High drama # hostel # Police

07-09-2018

ಬೆಂಗಳೂರು: ನಗರದಲ್ಲಿ ಕಾಲೇಜು ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಹೋಗಲು ಅಪಹರಣದ ಹೈಡ್ರಾಮಾ ಮಾಡಿ ಕೆ.ಜಿ ಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಹೆಚ್.ಬಿ.ಆರ್ ಲೇಔಟ್ ಖಾಸಗಿ ಕಾಲೇಜಿನ ಹಾಸ್ಟೆಲಿನಲ್ಲಿದ್ದ ಯುವತಿಯೊಬ್ಬಳು ರಾತ್ರೊರಾತ್ರಿ ಪ್ರಿಯಕರನ ಜೊತೆ ಹೋಗಿದ್ದು, ಬಳಿಕ ಅಪಹರಿಸಲಾಗಿದೆ ಎಂದು ನಾಟಕವಾಡಿದ್ದಾಳೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಯುವತಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟುಕಳುಹಿಸಿದ್ದಾರೆ.

ಘಟನೆಯ ವಿವರ: ರಾತ್ರಿ ಹಾಸ್ಟೆಲಿಗೆ ಬೀಗ ಹಾಕಿ ಸೆಕ್ಯುರಿಟಿ ಗಾರ್ಡ್ ನೀರು ತರಲು ಹೋಗಿದ್ದರು. ಸೆಕ್ಯುರಿಟಿ ಇಲ್ಲದನ್ನು ನೋಡಿಕೊಂಡು ಯುವತಿ ಪ್ರಿಯಕರನ ಜೊತೆ ನಾಪತ್ತೆಯಾಗಿದ್ದಾಳೆ. ಆದರೆ ಈಕೆ ಅನುಮಾನ ಬಾರದಂತೆ ಹಾಸ್ಟೆಲಿನಿಂದ ಹೋಗುವಾಗ ಚೀರಾಡಿ ಪರಾರಿಯಾಗಿದ್ದಾಳೆ. ನಂತರ ಸೆಕ್ಯೂರಿಟಿ ಗಾರ್ಡ್ ಯುವತಿಯ ಚೀರಾಟ ಕೇಳಿ ಅಪಹರಿಸಲಾಗಿದೆ ಎಂದು ಆತಂಕಗೊಂಡು ಹಾಸ್ಟೆಲ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣ ಹಾಸ್ಟೆಲ್ ಸಿಬ್ಬಂದಿ ಮತ್ತು ಸೆಕ್ಯುರಿಟಿ ಗಾರ್ಡ್ ಕೂಡಲೇ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಯುವತಿಯ ಅಪಹರಣವಾಗಿದೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೀಘ್ರದಲ್ಲೇ ತನಿಖೆಗೆ ವಿಶೇಷ ತಂಡ ರಚಿಸಿ ಪತ್ತೆ ಹಚ್ಚಿ ನಡೆಸಿದ ವಿಚಾರಣೆ ವೇಳೆ ಯುವತಿಯ ಹೈಡ್ರಾಮಾ ಬಯಲಾಗಿದೆ.

ಯುವತಿ ಅಪಹರಣದಂತೆ ಹೈಡ್ರಾಮಾ ಮಾಡಿ ಪ್ರಿಯಕರನ ಜೊತೆ ಹೋಗಿದ್ದಳು ಎಂದು ತಿಳಿದು ಬಂದಿದೆ. ನಂತರ ಪೊಲೀಸರು ಯುವತಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟುಕಳುಹಿಸಿದ್ದಾರೆ. ಈ ಘಟನೆ ಸಂಬಂಧ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಸಂಬಂಧಿತ ಟ್ಯಾಗ್ಗಳು

drama Hostle ಹೈಡ್ರಾಮಾ ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ