'ಇದೇನು ಸರ್ವಾಧಿಕಾರವೇ': ಕೆ.ಎಸ್.ಈಶ್ವರಪ್ಪ

#K.S.Eshwarappa  #PLB Bank #Congress

07-09-2018

ಶಿವಮೊಗ್ಗ: 'ಬೆಳಗಾವಿ ಪಿಎಲ್ ಡಿ ಬ್ಯಾಂಕ್  ಚುನಾವಣೆ ಫಲಿತಾಂಶದ ಮೇಲೆ ಸರ್ಕಾರ ನಿಲ್ಲುತ್ತಾ? ಬೀಳುತ್ತಾ ಅನ್ನುವಂತಾಗಿದೆ ‘ಕಾಂಗ್ರೆಸ್ ಪಕ್ಷಕ್ಕೆ ಹೇಳೋರೋ ಕೇಳೋರು ಯಾರೂ ಇಲ್ಲ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ತಾನು ಹೇಳಿದಂತೆ ಆಗದಿದ್ದರೆ ಸರ್ಕಾರ ಬೀಳುತ್ತೆ ಎಂದು ಅಂತಿದ್ದಾರೆ ಕಾಂಗ್ರೆಸ್ ನಾಯಕರೊಬ್ಬರು. ಇದೇನು ಸರ್ವಾಧಿಕಾರವೇ? ಪಕ್ಷ-ಸರ್ಕಾರ ಯಾರ ಹಿಡಿತದಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

‘ಯಾರೂ ಕೂಡ ಬಹಿರಂಗ ಹೇಳಿಕೆ ಕೊಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಆದರೆ, ಈ ಆದೇಶ ಕಾಂಗ್ರೆಸ್ ಮುಖಂಡ ಜಾರಕಿಹೊಳಿ ಪ್ರಕಾರ ಕಾಲಕಸವಾಗಿದೆ. ಒಂದು ರಾಷ್ಟ್ರೀಯ ಪಕ್ಷ‌ ಕಾಂಗ್ರೆಸ್ ಗೆ ಇಂಥಹ ಹೀನಾಯ ಸ್ಥಿತಿ ಬರಬಾರದಿತ್ತು. ಅವರ ಬಡಿದಾಟ ಅವರಿಗೆ ಮಾತ್ರ ಸಂಬಂಧಿಸಿದ್ದು. ಇದರಲ್ಲಿ ನಾವು ತಲೆ ತೂರಿಸಲ್ಲ. ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಇನ್ನೊಬ್ಬ ಮಹಿಳೆ ಚುನಾಯಿತ ಪ್ರತಿನಿಧಿ ಶಾಸಕಿಯನ್ನು ಕಾಲಕಸಕ್ಕೆ ಸಮ ಎಂದಿದ್ದಾರೆ. ಇದು‌ ಮಹಿಳಾ ಕುಲಕ್ಕೆ, ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನ. ಹಾದಿರಂಪ ಬೀದಿರಂಪ ಮಾಡಿಕೊಂಡು ಕಾಂಗ್ರೆಸ್ ದಯನೀಯ ಪರಿಸ್ಥಿತಿಯಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಮುಖ ಕುಮಾರಸ್ವಾಮಿ ನೋಡಲ್ಲ, ಇವರ ಮುಖ ಅವರು ನೋಡಲ್ಲ. ಇಂಥಹ ಸಂದರ್ಭದಲ್ಲಿ ಬಿಎಸ್ ವೈ ಹಾ ಗೂ ಅವರ ಕುಟುಂಬದವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.S.Eshwarappa PLD ಸಿದ್ದರಾಮಯ್ಯ ಕೆಪಿಸಿಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ