ಪ್ರೇಮ‌ ವಿವಾಹಕ್ಕೆ ವಿರೋಧ: ಹುಡುಗನ ಮನೆ ಧ್ವಂಸ

#love marriage #cast

07-09-2018

ಕೋಲಾರ: ಪ್ರೇಮ‌ ವಿವಾಹಕ್ಕೆ ವಿರೋಧಿಸಿ ಹುಡುಗಿಯ ಮನೆಯವರು ಹುಡುಗನ ಮನೆ ದ್ವಂಸ ಮಾಡಿರುವ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ. ಹುಡುಗಿ ಮನೆಯವರ ವಿರೋಧದ ನಡುವೆ ಮದುವೆ ಮಾಡಿಕೊಂಡ ಹುರಳಗೆರೆ ಗ್ರಾಮದ ಶಶಿಕುಮಾರ್(25) ಹಾಗೂ ರಮ್ಯ (21) ಮದುವೆಯಾಗಿದ್ದಾರೆ. ಒಂದೆ ಗ್ರಾಮದವರಾದ ಇವರು ಅಕ್ಕಪಕ್ಕದ ಮನೆಯವರು ಎಂದು ತಿಳಿದು ಬಂದಿದೆ. ಮದುವೆ ಮಾಡಿಕೊಂಡು ಹುಡುಗನ ಮನೆಗೆ ಬರುತ್ತಿದ್ದಂತೆ ಕೆರಳಿದ ಹುಡುಗಿಯ ಮನೆಯವರು, ಹುಡುಗನ ಪೋಷಕರಿಗೆ ಥಳಿಸಿ ಮನೆ ಧ್ವಂಸ ಮಾಡಿದ್ದಾರೆ. ಜಾತಿ ಬೇರೆ ಎನ್ನುವ ಕಾರಣಕ್ಕೆ ಮದುವೆಗೆ ವಿರೋಧಿಸಿ ಹುಡುಗನ ಪೋಷಕರನ್ನು ಥಳಿಸಿ, ‌ಮನೆ ಧ್ವಂಸ‌ ಮಾಡಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

love Marriage ಪ್ರೇಮ‌ ವಿವಾಹ ಗ್ರಾಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ