ಸಲಿಂಗಕಾಮ ತಪ್ಪಲ್ಲ ಎಂದ ಸುಪ್ರೀಂ ಕೋರ್ಟ್

Supreme Court dismisses homosexuality

06-09-2018

ಬ್ರಿಟಿಷ್ ಯುಗದ ಕನೂನಾಗಿದ್ದ ಅನೈಸರ್ಗಿಕ ಲೈಂಗಿಕತೆಯ ನಿರ್ಬಂಧನೆ  ಸೆಕ್ಷನ್ 377 ಎಂದೇ ಚರ್ಚಿಸಲ್ಪಡುತ್ತಿತ್ತು. ಇಂಡಿಯನ್ ಪೀನಲ್ ಕೋಡ್ ನ ಸೆಕ್ಷನ್ ಆಗಿರುವ ಈ ಕಾನೂನು ಭಾರತೀಯರಿಗೆ ಒಪ್ಪುವ ಕಾನೂನಲ್ಲ ಎಂದು ಹೇಳಲಾಗುತ್ತಿತ್ತು. ವಿಕ್ಟೋರಿಯಾ ರಾಣಿಯ ಅವಧಿಯಲ್ಲಿ ಸಾಂಪ್ರದಾಯಿಕತೆಗೆ ಒತ್ತು ನೀಡುವ ದೃಷ್ಟಿಯಿಂದ ಹುಟ್ಟು ಹಾಕಿದ ಇಂಥ ಕಾನೂನುಗಳು ಭಾರತಕ್ಕೆ ಬ್ರಿಟಿಷರ ಮೂಲಕ ಬಂದರೂ, ಇಂಗೆಂಡಿನಲ್ಲೇ ಈ ರೀತಿಯ ಕಾನೂನುಗಳನ್ನು ಅನೂರ್ಜಿತಗೊಳಿಸಿ ದಶಕಗಳೇ ಕಳೆದಿವೆ. ಭಾರತದಲ್ಲಿ ಈ ಕಾನೂನಿನ ವಿರುದ್ಧ ಬಹಳ ವರ್ಷಗಳಿಂದ ಹೋರಾಟ ನೆಡೆಯುತ್ತಾ ಬಂದಿದೆ. ವಯಸ್ಕ ವ್ಯಕ್ತಿಗಳ ಮಧ್ಯೆ ನಡೆಯುವ ಭಾವನಾತ್ಮಕ ಅಥವ ಲೈಂಗಿಕ ಕ್ರಿಯೆಗಳಲ್ಲಿ ಸರ್ಕಾರ ಮೂಗು ತೂರಿಸಬಾರದು ಮತ್ತು ನೈತಿಕತೆ ಎನ್ನುವುದು ಸಂವಿಧಾನ ಬದ್ಧವಾಗಿರಬೇಕೇ ವಿನಃ ಬಹುಸಂಖ್ಯಾತರ ಮರ್ಜಿಗನುಗುಣವಾಗಿರಬಾರದು ಎಂದು ಈ ಕಾನೂನಿನ ವಿರೋಧಿಗಳು ವಾದ ಮಾಡಿದ್ದರು.

ಈ ಕಾನೂನು ತಪ್ಪೆಂದು ಹಿಂದೆ ದೆಹಲಿ ಹೈ ಕೋರ್ಟ್ ತೀರ್ಪು ನೀಡಿದ ಬಳಿಕ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ದೆಹಲಿ ಕೋರ್ಟಿನ ತೀರ್ಪನ್ನು ತಿರಸ್ಕರಿಸಿತು, ಮತ್ತು ಅದೊರೊಂದಿಗೆ ಈ ಬಗ್ಗೆ ಕೇಂದ್ರ ಸರ್ಕಾರ ಕಾನೂನು ಪರಿಷ್ಕರಣೆ ಮಾಡಬಹುದು ಎಂದು ಹೇಳಿತ್ತು. ಕೇಂದ್ರ ಸರ್ಕಾರ ಈ ತಕರಾರನ್ನು ಸುಪ್ರೀಂ ಕೋರ್ಟಿನ ಪರಾಮರ್ಶೆಗೆ ಬಿಟ್ಟಿತು.

ಇಂದು ಹೊರಬಿದ್ದ ತೀರ್ಪು ಸುಪ್ರೀಂ ಕೋರ್ಟಿನ ಪಂಚಸದಸ್ಯ ಪೀಠದಿಂದ ನೀಡಲಾಗಿದ್ದು, ಪೀಠದ ಪ್ರತಿ ಸದಸ್ಯ ನ್ಯಾಯಾಧೀಶರೂ ಈ ಬಗ್ಗೆ ಪ್ರತ್ಯೇಕ ತೀರ್ಪು ನೀಡಿದ್ದಾರೆ. ಆ ಎಲ್ಲ ತೀರ್ಪುಗಳೂ ಸೆಕ್ಷನ್ 377 ರ ವಿರುದ್ಧ ಸ್ಪಷ್ಟ ನುಡಿಯಲ್ಲಿವೆ. ಈ ತೀರ್ಪು ಸಮಲೈಂಗಿಕತೆಯ ಪರವಿದ್ದರೂ ಕೂಡ, ಸೆಕ್ಷನ್ 377 ಎಲ್ಲಾ ಅವಕಾಶಗಳ್ಳನ್ನು ತಿರಸ್ಕರಿಸಿಲ್ಲ. ಉದಾಹರಣೆಗೆ ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ಮತ್ತು ಹಿಂಸಾತ್ಮಕ ಲೈಂಗಿಕ ಕ್ರಿಯೆಯನ್ನು ತೀರ್ಪು ಸ್ಪಷ್ಟವಾಗಿ ಅಪರಾಧವೆಂದೇ ಪರಿಗಣಿಸಿದೆ.

ಇಂದು ಹೊರ ಬಂದ ತೀರ್ಪಿನ ಬಗ್ಗೆ ದೇಶದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಅನೇಕ ಖ್ಯಾತ ವ್ಯಕ್ತಿಗಳು ಮತ್ತು ರಾಜಕೀಯ ನಾಯಕರು ತೀರ್ಪಿನ ಪರವಾಗಿ ಧ್ವನಿಗೂಡಿಸಿದ್ದಾರೆ. ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮಾತ್ರ ಈ ತೀರ್ಪು ತಪ್ಪು, ಇದನ್ನು ಪ್ರಶ್ನಿಸಬೇಕು, ಈ ತೀರ್ಪಿನಿಂದ ಅನೈತಿಕತೆ ಹೆಚ್ಚುತ್ತದೆ ಮತ್ತು ಲೈಂಗಿಕ ಕಾಯಿಲೆಗಳು ಹರಡುವಂತಾಗುತ್ತದೆ ಎಂದಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಾಧ್ಯಮ ಮತ್ತು ಯುನೈಟೆಡ್ ನೇಶನ್ಸ್ ಕೂಡ ಈ ತೀರ್ಪನ್ನು ಪ್ರಶಂಸಿವೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ