ಅಧಿಕಾರಿಗಳ ಬೇಕಾಬಿಟ್ಟಿ ವಿದೇಶಿ ಪ್ರವಾಸಕ್ಕೆ ಬ್ರೇಕ್!

#officers # foreign tour # Karnataka government

05-09-2018

ಬೆಂಗಳೂರು: ಇನ್ನು ಮುಂದೆ ರಾಜ್ಯ ಸರ್ಕಾರದ ಅಧಿಕಾರಿಗಳು ಬೇಕಾಬಿಟ್ಟಿ ವಿದೇಶ ಪ್ರವಾಸ ಮಾಡುವಂತಿಲ್ಲ. ಸರ್ಕಾರ ವಿಧಿಸುವ ಹಲವು ನಿಯಮ ನಿಬಂಧನೆಗಳನ್ನು ಪೂರೈಸಬೇಕಾಗುತ್ತದೆ.

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ವಿದೇಶ ಪ್ರವಾಸಕ್ಕೆಂದು ಯಾವುದೇ ಕಾರಣಕ್ಕೂ ನೇರವಾಗಿ ಮುಖ್ಯ ಮಂತ್ರಿಗಳಿಗೆ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವಂತಿಲ್ಲ ಎಂದು ಹೇಳಿದೆ.

ಸಂಬಂಧಪಟ್ಟ ಇಲಾಖೆ ಸಚಿವರಿಗೆ ಅರ್ಜಿ ಸಲ್ಲಿಸಿ, ಸಕಾರಣಗಳನ್ನು ನೀಡಬೇಕು. ಸಚಿವರಿಂದ ಅನುಮತಿ ಸಿಕ್ಕಿದ ನಂತರವೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಹಾಗೂ ಕೇಂದ್ರದ ವಿದೇಶಾಂಗ ಮತ್ತು ಗೃಹ ಇಲಾಖೆಗಳ ಒಪ್ಪಿಗೆ ಪಡೆಯಬೇಕು ಎಂದು ಹತ್ತು ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಅಧಿಕಾರಿಗಳ ವಿದೇಶ ಪ್ರವಾಸದ ತಂಡದಲ್ಲಿ ಎಷ್ಟು ಸದಸ್ಯರಿರುತ್ತಾರೆ, ಅವರ ಪ್ರವಾಸದಿಂದ ರಾಜ್ಯಕ್ಕೆ ಆಗುವ ಅನುಕೂಲಗಳೇನು ಇತ್ಯಾದಿ ವಿವರಗಳನ್ನು ಒದಗಿಸಬೇಕು; ವಿದೇಶದಲ್ಲಿ ವಿಶೇಷ ಆತಿಥ್ಯ ಪಡೆಯುವುದಾದರೆ ಕೇಂದ್ರ ವಿದೇಶಾಂಗ ಹಾಗೂ ಗೃಹ ಇಲಾಖೆಗಳ ಪೂರ್ವಾನುಮತಿ ಪಡೆಯಬೇಕು ಇತ್ಯಾದಿ ಇನ್ನೂ ಹಲವು ನಿಯಮಗಳನ್ನು ಹಾಗೂ ಇತಿಮಿತಿಗಳನ್ನು ಹೇರಲಾಗಿದೆ.


ಸಂಬಂಧಿತ ಟ್ಯಾಗ್ಗಳು

officers foreign tour ಇತ್ಯಾದಿ ವಿದೇಶಾಂಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ