ಗೌರಿ ಬಳಗದಿಂದ ರಾಜಭವನ ಚಲೋ

gauri murder: #raj bhavan chalo #gauri balaga

05-09-2018

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ಹತ್ಯೆಯಾಗಿ ಸೆಪ್ಟೆಂಬರ್ 5ಕ್ಕೆ ಅಂದರೆ ಇಂದಿಗೆ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಬಳಗದ ಮುಖಂಡರುಗಳು ಹತ್ಯೆ ಹಿಂದಿರುವ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಿದರು.

ಮೌರ್ಯ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಇಂದು ಹಮ್ಮಿಕೊಂಡಿದ್ದ ರಾಜಭವನ ಚಲೋ ಹೋರಾಟದಲ್ಲಿ ಗೌರಿ ಬಳಗದ ಮುಖಂಡರು, ಕಾರ್ಯಕರ್ತರು, ವಿಚಾರವಾದಿಗಳ ಹತ್ಯೆ ಹಿಂದಿರುವ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ.

ರಾಜ ಭವನ ಚಲೋ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಜರ್ಮನಿಯ ಹಿಟ್ಲರ್ ನಿಂದ ಎರವಲು ಪಡೆದ ಸಾಂಸ್ಕೃತಿಕ ರಾಷ್ಟ್ರೀಯತೆಯ ಸಿದ್ಧಾಂತವನ್ನು ಆಧರಿಸಿ ಆರ್.ಎಸ್‍.ಎಸ್. ಜನ್ಮತಳೆಯಿತು. ಈ ತತ್ವ ಭಾರತದ ನೆಲಕ್ಕೆ ಒಗ್ಗುವುದಿಲ್ಲ. ಭಾರತದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ  ಊಳಿಗಮಾನ್ಯ ಪದ್ಧತಿಗೆ ಭಾರತ ಜೋತು ಬೀಳಬೇಕು ಎಂದು ಆರ್ಎಸ್‍ಎಸ್ ಬಯಸುತ್ತದೆ ಎಂದು ಹೇಳಿದರು.

ಗೌರಿ ಬಳಗ: ಮೇಲ್ಜಾತಿಗಳಿಗೆ ಅನುಕೂಲ ಮಾಡಿಕೊಡಲು ಸಮಾಜದ ಇತರೆಲ್ಲ ಸಮುದಾಯಗಳನ್ನು ಹೀಗಳೆಯುತ್ತದೆ. ವೈದಿಕ ಪರಂಪರೆ ಮತ್ತು ಭಾರತದ ಮೂಲ ಅಧ್ಯಾತ್ಮಕ್ಕೆ ಆರ್.ಎಸ್‍.ಎಸ್. ಒಂದು ಬೆದರಿಕೆ ಎಂಬ ವಿಚಾರದಲ್ಲಿ ನನಗೆ ಎಂದಿಗೂ ಗೊಂದಲ ಇರಲಿಲ್ಲ. ಆರ್.ಎಸ್‍.ಎಸ್.ಕುರಿತಂತೆ ಇರುವ ನನ್ನ ತಕರಾರು ಅಧ್ಯಾತ್ಮಿಕವಾದುದು ಎಂದು ತಿಳಿಸಿದರು.

ಮಾಜಿ ಸಚಿವೆ ಲಲಿತಾ ನಾಯ್ಕ್ ಮಾತನಾಡಿ, ಸಾಮಾಜಿಕ ಹೋರಾಟಗಾರ ಅಗ್ನಿವೇಶ ಸ್ವಾಮೀಜಿ ಮೇಲೆ ಹಲ್ಲೆ ನಡೆಸುವುದು ಖಂಡನೀಯ. ನಮಗೂ ಹಲ್ಲೆ, ಪುಡಾಂಟಿಕೆ ಮಾಡುವುದು ಬರುತ್ತದೆ. ಆದರೆ, ಸಂವಿಧಾನ ಬಾಹಿರ ಎಂದು ನಾವು ಮಾಡುವುದಿಲ್ಲ ಎಂದು ಹೇಳಿದರು.

ಹಿರಿಯ ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ಮೂಲಭೂತವಾದಿಗಳು ಕೇವಲ ಲೇಖಕರ, ಮಾನವ ಹಕ್ಕಗಳ ಹೋರಾಟಗಾರರ ಮೇಲೆ ನಡೆಯುತ್ತಿಲ್ಲ. ಇಡೀ ಜನಸಮುದಾಯದ ಸ್ವಾಭಿಮಾನದ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬೇಡಿಕೆಗಳು: ಸನಾತನ ಸಂಸ್ಥೆ ಮತ್ತು ಹಿಂದೂ ಜನ ಜಾಗೃತಿ ಸಂಸ್ಥೆಗಳು ಭಯೋತ್ಪಾದಕ ಸಂಸ್ಥೆಯಂದು ಘೋಷಿಸಬೇಕು. ಈ ಸಂಸ್ಥೆಗಳ ಭಯೋತ್ಪಾದಕ ಪ್ರಚಾರ ಮತ್ತು ಭಯೋತ್ಪಾದನಾ ಚಟುವಟಿಕೆಗಳ ಮೇಲೆ ನಿಷೇಧ ಹೇರಬೇಕು ಮತ್ತು ಅವರ ಇತರ ಚಟುವಟಿಕೆ ಮೇಲೆ ನಿಗಾ ಇಡಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಬೇಕು.

ಮೆರವಣಿಗೆ ವೇಳೆ ಬಹುಭಾಷಾ ನಟ, ಚಿಂತಕ ಪ್ರಕಾಶ್ ರೈ, ದಸಂಸ ಮುಖಂಡ ಮೋಹನ್ ರಾಜ್, ಮಾಜಿ ಶಾಸಕ ಶ್ರೀರಾಮ ರೆಡ್ಡಿ, ಬಿಎಸ್ಪಿಯ ಹರಿರಾಮ್, ಹಿರಿಯ ಸಾಹಿತಿಗಳಾದ ಜಿ.ಕೆ.ಗೋವಿಂದರಾವ್, ಕೆ.ಎಸ್.ಭಗವಾನ್, ವಿಜಯಾ, ಕನ್ಹಯ್ಯಾ ಕುಮಾರ್, ದಲಿತ ಹೋರಾಟಗಾರ ಎನ್.ವೆಂಕಟೇಶ್, ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸೇರಿ ಪ್ರಮುಖರಿದ್ದರು.


ಸಂಬಂಧಿತ ಟ್ಯಾಗ್ಗಳು

protest Gauri Lankesh ಮೆರವಣಿಗೆ ಸಹೋದರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ