ಅದು ಅವರ ಪಕ್ಷ ಅವರ ಇಷ್ಟ ಏನು ಬೇಕಾದ್ರೂ ಮಾಡಿಕೊಳ್ಳಬಹುದು !

Kannada News

01-06-2017

ಬೆಂಗಳೂರು:-  ನಾವು ಕಾಂಗ್ರೆಸ್ ಸೇರುತ್ತೇವೆ ಎಂದು ಹೇಳಿಲ್ಲ. ಎಲ್ಲಿಗೆ ಹೋಗಬೇಕು ಎಂದು ಯೋಚಿಸಿಯೂ ಇಲ್ಲ. ಹೀಗಿರುವಾಗ ಮುಂದೆ ಯಾವ ಪಕ್ಷ ಸೇರುತ್ತೇವೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಜೆಡಿಎಸ್ ಬಂಡಾಯ ನಾಯಕ ಚೆಲುವರಾಯಸ್ವಾಮಿ ಹೇಳಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಇಂದು ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತ್ತೆ ನಾವೆಲ್ಲಾ ಶಾಸಕರಾಗಿ ಆಯ್ಕೆಯಾಗಬೇಕೆಂದು ಗಾಳಿ ಆಂಜನೇಯನಲ್ಲಿ ಬೇಡಿಕೊಂಡಿದ್ದೇವೆ. ನಾವು (ಬಂಡಾಯ ಶಾಸಕರು) ಒಟ್ಟಿಗೆ ಇದ್ದೇವೆ ಎಂದರು. ನಾವು ಮುಂದಿನ ಬಾರಿ ಚುನಾವಣೆಗೆ ಸ್ಫರ್ಧಿಸುವುದು ಸ್ಪಷ್ಟ ಎಂದ ಅವರು, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಬಂದಾಗ ನಮ್ಮ ಬಗ್ಗೆ ಮಾತನಾಡಿದ್ದಾರೆ ಎಂಬುವುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದರು. ಇದು ಚುನಾವಣಾ ವರ್ಷ  ಹೀಗಾಗಿ ನಮ್ಮ ಬೇಡಿಕೆಯನ್ನು ದೇವರ ಮುಂದಿಟ್ಟಿದ್ದೇವೆ. ಇಂದಿನಿಂದ ಮಾಜಿ ಸಿಎಂ ಕುಮಾರಸ್ವಾಮಿ ಆರಂಭ ಮಾಡಿರುವ ಮನೆ ಮನೆಗೆ ಕುಮಾರಣ್ಣ ಪ್ರಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದು ಅವರ ಪಕ್ಷ. ಅವರ ಇಷ್ಟ. ಏನು ಬೇಕಾದ್ರೂ ಮಾಡಿಕೊಳ್ಳಬಹುದು. ಅವರ ಬಗ್ಗೆ ನಾವೇನೇ ಮಾತನಾಡಿದರು ಅದು ತಪ್ಪಾಗುತ್ತದೆ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ