90ರ ಇಳಿ ವಯಸ್ಸಲ್ಲೂ ಪರೀಕ್ಷೆ ಬರೆದ ಅಜ್ಜ

An 90 years old man written a phd entrance exam

05-09-2018

ಕೊಪ್ಪಳ: ಓದುವ ಉತ್ಸಾಹ ಕುಂದದ, ಯುವ ಶಿಕ್ಷಕರನ್ನೂ ನಾಚಿಸುವಂತೆ 90 ವರ್ಷದ ಇಳಿ ವಯಸ್ಸಿನಲ್ಲೂ ಪಿಹೆಚ್‌ಡಿಗಾಗಿ‌ ಪ್ರವೇಶ ಪರೀಕ್ಷೆ ಬರೆದಿದ್ದಾರೆ ಅಜ್ಜರೊಬ್ಬರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದಂತಹ ಕೊಪ್ಪಳದ ಬಿಸರಳ್ಳಿ ಗ್ರಾಮ ನಿವಾಸಿ ಶರಣ ಬಸವರಾಜ್ ಬಿಸರಳ್ಳಿ ಈ ಶಿಕ್ಷಕ. ನಿವೃತ್ತಿಯ ನಂತರವೂ ನಿರಂತರ ಅಧ್ಯಯನ ಮಾಡುತ್ತಿರುವ ಇವರು, ಹಂಪಿ ಕನ್ನಡ ವಿ.ವಿಯಲ್ಲಿ ಪಿಹೆಚ್‌ಡಿ  ಅಧ್ಯಯನಕ್ಕಾಗಿ ಪರೀಕ್ಷೆ ಬರೆದಿದ್ದಾರೆ. ಸಾಹಿತ್ಯ ಅಧ್ಯಯನ ವಿಭಾಗಕ್ಕೆ ಪ್ರವೇಶ ಬಯಸಿ ಕಳೆದ ಬಾರಿಯೂ ಪರೀಕ್ಷೆ ಬರೆದು ಪ್ರಯತ್ನಿಸಿದ್ದರು. ಆದರೂ ಉತ್ಸಾಹ ಕುಂದದೆ ಮತ್ತೊಮ್ಮೆ ಪರೀಕ್ಷೆ ಬರೆದಿದ್ದಾರೆ. ಆದರೂ ಉತ್ಸಾಹ ಕುಂದದೆ ಮತ್ತೊಮ್ಮೆ ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Phd Exam ಸಾಹಿತ್ಯ ಹಂಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ