ಬೆಳ್ಳೂರು ಪ.ಪಂಚಾಯತಿ: ಬಹುಮತ ಇದ್ದರೂ ‘ಕೈ’ಗೆ ಸಿಗಲ್ಲ ಗದ್ದುಗೆ?

Bellur pattana panchayat congress of Jds?

05-09-2018

ಮಂಡ್ಯ: ಈ ಬಾರಿ ಜಿಲ್ಲೆಯಲ್ಲಿ 5 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಬೆಳ್ಳೂರು ಪಟ್ಟಣ ಪಂಚಾಯತ್ ಮಾತ್ರ ಬಹುಮತವನ್ನು ಪಡೆದಿತ್ತು. ಉಳಿದ ನಾಲ್ಕು ಪಂಚಾಯತಗಳು ಜೆಡಿಎಸ್ ಪಾಲಾಗಿದ್ದವು. ಬೆಳ್ಳೂರು ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಅಧಿಕಾರವನ್ನು ಪಡೆದುಕೊಂಡಿತು ಎನ್ನುವಷ್ಟರಲ್ಲಿ, ಮೀಸಲಾತಿ ನೀತಿ ಕಾಂಗ್ರೆಸ್ ಗೆ ಮುಳುವಾಗಿದೆ.

13 ಸ್ಥಾನಗಳಲ್ಲಿ ಒಟ್ಟು 7 ಸ್ಥಾನಗಳನ್ನು ಪಡೆದು ಬಹುಮತ ಪಡೆದುಕೊಂಡಿದ್ದ ಕಾಂಗ್ರೆಸ್, ಅಧಿಕಾರದ ಗದ್ದುಗೆ ಏರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಈ ಪಂಗಡದಿಂದ ಕಾಂಗ್ರೆಸ್ ನ ಒರ್ವ ಅಭ್ಯರ್ಥಿಯು ಗೆಲುವು ಸಾಧಿಸಿಲ್ಲ. ಈಗ ಮೀಸಲಾತಿ ಅನ್ವಯ ಅಧಿಕಾರ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ. ಪರಿಶಿಷ್ಟ ಪಂಗಡದಿಂದ ಮೊದಲನೆ ವಾರ್ಡ್ ಅಭ್ಯರ್ಥಿ ಜೆಡಿಎಸ್ ನ ರಾಮಲಿಂಗಯ್ಯ ಗೆಲುವು ಸಾಧಿಸಿದ್ದಾರೆ. ಇವರು ಶಾಸಕ ಸುರೇಶ ಗೌಡರ ಬೆಂಬಲಿಗರಾಗಿದ್ದಾರೆ. ಹಾಗಾಗಿ ಸರ್ಕಾರ ಬಿಡುಗಡೆ ಮಾಡಿರುವ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಜೆಡಿಎಸ್ ನ ರಾಮಲಿಂಗಯ್ಯ ಪಾಲಾಗುವ ಸಾಧ್ಯತೆ ಇದೆ.


ಸಂಬಂಧಿತ ಟ್ಯಾಗ್ಗಳು

panchayat election ಪಟ್ಟಣ ಪಂಚಾಯತ್ ಅಧಿಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ