ಸಮ್ಮಿಶ್ರ ಸರ್ಕಾರದ ವಿರುದ್ಧ ಉ.ಕ.ಭಾಗದಲ್ಲಿ ಆಕ್ರೋಶ!

Karnataka State Highways Improvement Project office shift issue!

05-09-2018

ಬೆಳಗಾವಿ: ಉತ್ತರ ಕರ್ನಾಟಕ ಜನರ ವಿರೋಧದ ನಡುವೆಯೂ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್) ಕಚೇರಿ ಬೆಳಗಾವಿಯಿಂದ ಹಾಸನಕ್ಕೆ ಎತ್ತಂಗಡಿಯಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ವಕ್ಷೇತ್ರಕ್ಕೆ ಕೆಶಿಪ್ ಶಿಫ್ಟ್ ಆಗುತ್ತಿರುವುದನ್ನು ಖಂಡಿಸಿ, ಸಮ್ಮಿಶ್ರ ಸರ್ಕಾರದ ನಿರ್ಧಾರಕ್ಕೆ ಉ.ಕ.ಭಾಗದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಿನ್ನೆಯಿಂದಲೇ ದಾಖಲೆಗಳನ್ನು ಗಂಟುಮೂಟೆ ಕಟ್ಟುತ್ತಿರುವ ಸಿಬ್ಬಂದಿಗಳು, ಹುದ್ದೆಗಳ ಸಮೇತವಾಗಿ ಕಚೇರಿ ಎತ್ತಂಗಡಿ ಆಗುತ್ತಿದೆ ಎನ್ನಲಾಗಿದೆ. ಈಗಿನ ಬಸವನಬಾಗೇವಾಡಿಯಲ್ಲಿದ್ದ ಕೆಶಿಪ್ ಉಪ ವಿಭಾಗದ ಕಚೇರಿ ಬೇಲೂರಿಗೆ ಶಿಫ್ಟ್ ಆಗುತ್ತಿದೆ. ಸಮ್ಮಿಶ್ರ ಸರ್ಕಾರದ ನಿರ್ಧಾರಕ್ಕೆ ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕರಿಂದಲೇ ವಿರೋಧ ವ್ಯಕ್ತವಾಗುತ್ತಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಕಚೇರಿ ಎತ್ತಂಗಡಿ ತಡೆಯಲ್ಲಿ ಉತ್ತರ ಕರ್ನಾಟಕದ ಸಚಿವರು, ಶಾಸಕರು ವಿಫಲರಾಗಿದ್ದಾರೆ ಎಂದು ಅಲ್ಲಿನ ಜನ ತೀವ್ರ ಆಕ್ರೋಶಗೊಂಡಿದ್ದಾರೆ.  


ಸಂಬಂಧಿತ ಟ್ಯಾಗ್ಗಳು

Uttara Kannada KSHIP ಎತ್ತಂಗಡಿ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ