ಪುತ್ರ ಅನುತ್ತೀರ್ಣನಾಗಿದ್ದರಿಂದ ನೊಂದ ತಾಯಿ ನೇಣಿಗೆ ಶರಣು !

Kannada News

01-06-2017

ಬೆಂಗಳೂರು:- ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪುತ್ರ ಫೇಲಾಗಿದ್ದರಿಂದ ನೊಂದ ತಾಯಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಕುಮಾರಸ್ವಾಮಿ ಲೇಔಟ್‍ನ ವಿವೇಕಾನಂದ ನಗರದಲ್ಲಿ ನಡೆದಿದೆ. ಎಎಫ್‍ಎಸ್ ಕಾಲೇಜಿನಲ್ಲಿ ಸೂಪರ್‍ವೈಸರ್ ಆಗಿದ್ದ ಮಹಾದೇವಿ ಮೃತಪಟ್ಟವರಾಗಿದ್ದಾರೆ. ಇತ್ತೀಚಿಗೆ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪುತ್ರ ನಿತಿನ್ ಫೇಲಾಗಿದ್ದರಿಂದ ನೊಂದಿದ್ದ ಮಹಾದೇವಿ ಅವರು ಮಗನೊಂದಿಗೆ ಜಗಳವಾಡಿದ್ದರು. ಪತಿ ಬಸವರಾಜ್ ಅವರು ಬುದ್ದಿ ಹೇಳಿದರೂ ಕೇಳದೆ ಆಕೆ ಮಗ ಫೇಲಾದ ನೋವಿನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಚೆನ್ನಮ್ಮನ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ