ಗೋತಾ ಹೊಡೆದ ಕನ್ನಡದ ಕೋಟ್ಯಧಿಪತಿ

Goat is a millionaire billionaire

04-09-2018

ಹೆಸರು ವ್ಯಾಕರಣಬದ್ದವಾಗಿ ಇರಬೇಕು, ಕಾರ್ಯಕ್ರಮ ಜನಪ್ರಿಯವಾಗಿರಬೇಕು, ನಿರೂಪಣೆ ಜನರನ್ನು ಆಕರ್ಷಿಕಬೇಕು ಎಂಬೆಲ್ಲ ಧ್ಯೇಯಗಳನ್ನು ಇಟ್ಟುಕೊಂಡು ರಮೇಶ್ ಅರವಿಂದ್ ಸಾರಥ್ಯದೊಂದಿಗೆ ಸುವರ್ಣ ವಾಹಿನಿಯಲ್ಲಿಆರಂಭವಾದ ಕನ್ನಡದ ಕೋಟ್ಯಧಿಪತಿ  ಆರಂಭದಿಂದಲೂ ವೀಕ್ಷಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಪುನೀತ್ ರಾಜ್ಕುಮಾರ್ ಹಿಂದೊಮ್ಮೆ ನಡೆಸಿಕೊಡುತ್ತಿದ್ದಾಗ ಅದರಲ್ಲಿ ಒಂದು ರೀತಿಯ ಮುಗ್ದತೆ ಇತ್ತು ಮತ್ತು ಜನರಿಗೂ ಆಸಕ್ತಿ ಇತ್ತು, ಆದರೆ ಈಗ ಕೋಟ್ಯಧಿಪತಿ ಕಾರ್ಯಕ್ರಮದ ಕ್ರಮದ ಬಗ್ಗೆಯೇ ಜನರಿಗೆ ಆಸಕ್ತಿಯಿಲ್ಲ ಹಾಗೇ ಕಾರ್ಯಕ್ರಮದ ಪ್ರಾಮಾಣಿಕತೆಯ ಬಗ್ಗೆಯೂ ಜನರಿಗೆ ಪ್ರಶ್ನೆಗಳಿರುವುದರಿಂದ ಈ ಬಾರಿಯ ಕನ್ನಡದ ಕೋಟ್ಯಧಿಪತಿ ಯಶಸ್ಸನ್ನು ಕಂಡಿಲ್ಲ.

ರಮೇಶ್ ಅರವಿಂದ್ ಜಾಣರಾಗಿದ್ದರೂ ಅವಶ್ಯಕತೆಗಿಂತ ಹೆಚ್ಚು ಮಾತನಾಡುತ್ತಾರೆ ಹಾಗು ಪುನೀತ್ ಅಥವ ಸುದೀಪ್ ರಷ್ಟು ಸ್ಟಾರ್ ವರ್ಚಸ್ಸು ಇಲ್ಲ, ಆ ಕಾರಣದಿಂದಲೂ ಈ ಕಾರ್ಯಕ್ರಮ ಜನರನ್ನು ಹಿಡಿದಿಡುವಲ್ಲಿ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಯಶಸ್ವಿಯಾಗಿದ್ದು ಅದರಲ್ಲಿ ಬಂದ ಅತಿಥಿಗಳ ಕಾರಣದಿಂದಾಗೇ ವಿನಃ ರಮೇಶ್ ಅರವಿಂದ್ ಅವರು ನಡೆಸಿಕೊಟ್ಟಿದ್ದರಿಂದ ಅಲ್ಲ ಎಂದು ಟಿವಿ ಮಾಧ್ಯಮ ತಜ್ಞರು ಹೇಳುತ್ತಿದ್ದಾರೆ.

ಆರಂಭದಿಂದಲೂ ಮೂರು ಪಾಯಿಂಟ್ ನ ಆಸು ಪಾಸಲ್ಲೆ ಇದ್ದ ಈ ಕಾರ್ಯಕ್ರಮ ಈಗಂತೂ ಎರಡು ಪಾಯಿಂಟ್ ಗಳ ಆಸುಪಾಸಿಗೆ ಬಂದಿರುವುದು ಸುವರ್ಣ ಚಾನಲ್ ಮಂದಿಗೂ ತಲೆ ನೋವಾಗಿದೆ ಎಂದು ಹೇಳಲಾಗಿದೆ. ಮುಂದಿನ ಬಾರಿ ನಿರೂಪಕರನ್ನು ಬದಲಿಸಿದರೆ ಮಾತ್ರ ಇನ್ನೊಂದು ಆವೃತ್ತಿ ಸಾಧ್ಯವಾಗಬಹುದು, ಇಲ್ಲದಿದ್ದರೆ ಇದೇ ಕನ್ನಡದ ಕೊನೆಯ ಕೋಟ್ಯಧಿಪತಿಯಾಗಿ ಬಿಡಬಹುದು ಎನ್ನಲಾಗುತ್ತಿದೆಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ