ದಲಿತ ಪದದ ನಿಷೇಧಕ್ಕೆ ಅಠಾವಳೆ ವಿರೋಧ

The word ban against Dalits athavale

04-09-2018

ಕೋರ್ಟ್ ತೀರ್ಪನ್ನು ಮುಂದಿಟ್ಟುಕೊಂಡು ಸರ್ಕಾರದ ಯಾವುದೇ ವ್ಯವಹಾರದಲ್ಲಿ ದಲಿತ ಪದ ಬಳಸಬಾರದು ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದ ಹಿನ್ನೆಲೆಯಲ್ಲೇ ಈಗ ಆ ಪದವನ್ನು ಸಮೂಹ ಮಾಧ್ಯಮ ಕೂಡ ಬಳಸಬಾರದು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸರಣ ಇಲಾಖೆ ನಿರ್ದೇಶನ ನೀಡಿದೆ. ಆದರೆ ದಲಿತ ಎಂಬ ಪದ ತುಳಿತಕ್ಕೊಳಗಾದವರ ಸ್ಥಿತಿಯನ್ನು ಸಂಕೇತಿಸುವ ಪದ, ಅದು ಅಪಮಾನದ ಪದವಲ್ಲ ಎಂದು ಈಗಾಗಲೇ ಅನೇಕ ದಲಿತ ನಾಯಕರು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈಗ ಕೇಂದ್ರದ ಸಾಮಾಜಿಕ ನ್ಯಾಯ ಇಲಾಖೆಯ ಮಂತ್ರಿಗಳಾಗಿರುವ ರಿಪಬ್ಲಿಕನ್ ಪಕ್ಷದ ರಾಮದಾಸ್ ಅಠಾವಳೆ ಅವರು ದಲಿತ ಪದದ ನಿಷೇಧದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ದಮನಿತ ಸಮುದಾಯವನ್ನು ದಲಿತ ಎಂದು ಕರೆಯುವುದರಲ್ಲಿ ಅಪಮಾನ ಎಲ್ಲಿದೆ ಎಂದು ಕೇಳಿದ್ದಾರೆ.

ದಲಿತ ಪದ ಸಂಸ್ಕೃತ ಮೂಲದಿಂದ ಬಂದಿದ್ದು ಅದರ ಅರ್ಥ ತುಳಿಯಲ್ಪಟ್ಟದ್ದು ಎಂದಾಗಿದೆ. ಅದು ವಾಸ್ತವವೇ ಆಗಿರುವುದರಿಂದ ಅಲ್ಲಿ ಅಪಮಾನ ಹೇಗೆ ಸಾಧ್ಯ ಎಂದು ಅನೇಕೆ ದಲಿತ ನಾಯಕರು ಕೇಳುತ್ತಿರುವ ಹಿನ್ನೆಲೆಯಲ್ಲಿ ರಾಮದಾಸ್ ಅವರ ಹೇಳಿಕೆ ಪ್ರಸ್ತುತವಾಗಿ ಕಂಡುಬರುತ್ತಿದೆ. 


ಸಂಬಂಧಿತ ಟ್ಯಾಗ್ಗಳು

ದಲಿತ ಅಠಾವಳೆ dalit Sanskrit origin


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಈಗಾಗಲೇ ರೂಢಿಯಲ್ಲಿರುವ ಹೆಸರಿನ ಅನಗತ್ಯ ಬದಲಾವಣೆಯನ್ನು ಎಲ್ಲರೂ ವಿರೋಧಿಸಬೇಕು. ಕಲಬುರ್ಗಿ ಬದಲು ಗುಲ್ಬರ್ಗಾ ಕೇಳಲು ಚೆನ್ನ. Gurgaon to Gurugram was stupid change as both mean the same. Bijapur name has historical significance and changing it to Vijayapura was awkward. Hubli to Hubballi was utter foolishness of Siddaramaiah and shows how ignorant he is towards Uttara Karnataka style of spoken Kannada.
  • Karthik
  • Professional