ರೈತರೊಬ್ಬರ ಜೀವಕ್ಕೆ ಕುತ್ತು ತಂದ ಯುವಕರ ಬೈಕ್ ರೈಡ್ ಕ್ರೇಜ್!

Bike riding: farmer met with an accident

03-09-2018

ಬೆಂಗಳೂರು: ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡಲು ಹೋದ ಯುವಕರ ಜಾಲಿ ರೈಡ್ ಬೈಕ್ ಕ್ರೇಜ್ ನಿಂದ ರೈತರೊಬ್ಬರ ಜೀವಕ್ಕೆ ಕುತ್ತು ಬಂದಿರುವ ದುರ್ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯ ಕುಡ್ಲೂರು ಬಳಿ ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡಲು ಹೋದ ಯುವಕರ ಬೈಕ್ ರೈಡ್ ಕ್ರೇಜ್ ನಿಂದ ಗಾಯಗೊಂಡಿರುವ ಕುಡ್ಲೂರುವಿನ ರೈತ ಸಿದ್ದಪ್ಪ ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

ಕೆಟಿಎಂ ಇನ್ನಿತರ ಐಷರಾಮಿ ಹೈ ಸ್ಪೀಡ್ ಬೈಕ್‍ಗಳಲ್ಲಿ ನಗರದಿಂದ ಸುಮಾರು 30 ಯುವಕರ ತಂಡ ಕುಣಿಗಲ್ ಮಾರ್ಗವಾಗಿ ಸುತ್ತಾಡಲು ಭಾನುವಾರ ಹೋಗಿದ್ದಾರೆ. ವೇಗವಾಗಿ ಜಾಲಿ ರೈಡ್ ಮಾಡುತ್ತಿದ್ದಾಗ ನೆಲಮಂಗಲ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಕುಡ್ಲೂರು ಬಳಿ ರಸ್ತೆ ದಾಟುತ್ತಿದ್ದ ಸಿದ್ದಪ್ಪ ಅವರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬೈಕ್ ಸವಾರನನ್ನು ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bike riding Farmer ದುರ್ಘಟನೆ ಸರ್ಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ