ಜಗಳೂರು-ಪ.ಪಂಚಾಯತ್ ಚುನಾವಣೆಯಲ್ಲಿ ಅವ್ಯವಹಾರ: ವಕೀಲರೊಬ್ಬರ ಆರೋಪ

03-09-2018
ದಾವಣಗೆರೆ: ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವಕೀಲರೊಬ್ಬರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ವಕೀಲ ತಿಪ್ಪೇಸ್ವಾಮಿ ಎಂಬುವವರು ಜಗಳೂರು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. 18 ವಾರ್ಡ್ ಗಳ ಮತಪೆಟ್ಟಿಗೆಗಳನ್ನು ಯಾವುದೇ ಮಾಹಿತಿಯಿಲ್ಲದೆ ಸ್ಥಳಾಂತರಿಸಿದ್ದಾರೆ. ಸ್ಟ್ರಾಂಗ್ ರೂಂನಿಂದ ಸ್ಥಳಾಂತರಿಸಲು ಅಭ್ಯರ್ಥಿಗಳಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಮತದಾನದ ನಂತರದ ದಿನದಿಂದ ಇಲ್ಲಿಯವರೆಗೂ ಮತಪೆಟ್ಟಿಗೆಗಳ ಸ್ಥಳಾಂತರ ಮಾಡಿದ ಮಾಹಿತಿ ಗೌಪ್ಯವಾಗಿಯೇ ಇಟ್ಟು ಎಲ್ಲಾ ಅಭ್ಯರ್ಥಿಗಳಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವ್ಯವಹಾರದ ಈ ಬಗ್ಗೆ ತನಿಖೆಗೆ ಆದೇಶಿಸಲು ಒತ್ತಾಯಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ