ರೈಲಿಗೆ ಸಿಲುಕಿ ಯುವತಿ ಅನುಮಾನಾಸ್ಪದ ಸಾವು !

Kannada News

01-06-2017

ಬೆಂಗಳೂರು:- ನಗರದ ಹೊರವಲಯದ ದೊಡ್ಡಬಳ್ಳಾಪುರದ ಬಳಿ ರೈಲಿಗೆ ಸಿಕ್ಕಿ ಅನುಮಾನಾಸ್ಪದವಾಗಿ ಯುವತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಪ್ರಿಯಕರನ ಜೊತೆ ಓಡಿಹೋಗಿದ್ದ ದೊಡ್ಡಬಳ್ಳಾಪುರದ ಪ್ರಿಯಾ(19) ಎಂದು ಮೃತ ಯುವತಿಯನ್ನು ಗುರುತಿಸಲಾಗಿದೆ. ನಗರದ ಹೊರವಲಯದ ಅಪೆರಲ್ ಪಾರ್ಕಿನ ಇಂಡಿಗೋ ಬ್ಲೂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾ ಮೇ.20 ರಂದು ಕೆಲಸಕ್ಕೆ ಹೋದವಳು ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಮೊಬೈಲ್‍ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದ್ದರಿಂದ ಗಾಬರಿಗೊಂಡು ಆಕೆಯ ಪೋಷಕರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ಬಗ್ಗೆ ಕಾರ್ಖಾನೆಯಲ್ಲಿ ವಿಚಾರಿಸಿದಾಗ ಮಧ್ಯಾಹ್ನ ಅನುಮತಿ ಕೇಳಿ ಹೊರಗಡೆ ಹೋದಳೆಂದು ತಿಳಿಸಿದ್ದಾರೆ. ಪರಿಚಯಸ್ಥರು ಪ್ರಿಯಾ ಪ್ರೀತಿಸುತ್ತಿದ್ದ ವಡ್ಡರಪಾಳ್ಯ ಗ್ರಾಮದ ಶಶಿಕುಮಾರ್ ಜೊತೆ ಹೋಗಿದ್ದಾಳೆಂದು ಮಾಹಿತಿ ನೀಡಿದ್ದಾರೆ. ಇನ್ನು ಶಶಿಕುಮಾರ್ ಮತ್ತು ಪ್ರಿಯಾಳನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿದಾಗ ತಾವು ಮಧುಗಿರಿಯಲ್ಲಿ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಆ ನಂತರ ಇಬ್ಬರ ಮೊಬೈಲ್‍ಗಳೂ ಸ್ವಿಚ್ ಆಫ್ ಆಗಿವೆ. ಇವರಿಬ್ಬರೂ ಕಳೆದ 2 ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದು, ಪ್ರಿಯಾಳ ಪೋಷಕರು ಈ ಬಗ್ಗೆ ಶಶಿಕುಮಾರ್‍ಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರಂತೆ. ವಿಪರ್ಯಾಸವೆಂದರೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರೂ ರೈಲ್ವೆ ಪೊಲೀಸರು ಮೃತದೇಹ ಸಿಕ್ಕಿರುವ ಬಗ್ಗೆ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ಅತ್ತ ಮುಖಂಡರಿಂದ ಇತ್ತ ಪೊಲೀಸರಿಂದಲೂ ನ್ಯಾಯ ಸಿಗುತ್ತಿಲ್ಲ ಎಂದು ಪ್ರಿಯಾಳ ಕುಟುಂಬ ಸದಸ್ಯರು ನೋವನ್ನು ತೋಡಿಕೊಂಡಿದ್ದು, ತಮ್ಮ ಮಗಳ ಸಾವಿಗೆ ಶಶಿಕುಮಾರ್ ಕಾರಣ ಎಂದು ಆರೋಪಿಸುತ್ತಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ