ಹುನಗುಂದ-ಇಳಕಲ್ ಪಟ್ಟಣದಲ್ಲಿ 2 ದಿನ ನಿಷೇಧಾಜ್ಞೆ

2-days of Prohibition in Hungund-Ilkal town

03-09-2018

ಬಾಗಲಕೋಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಬಾಗಲಕೋಟೆ ಹುನಗುಂದ ಪಟ್ಟಣ ಹಾಗೂ ಇಳಕಳ್ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ 144 ಸೆಕ್ಷನ್ ಜಾರಿಗೊಳಿಸಿ ಹುನಗುಂದ ತಹಶೀಲ್ದಾರ್ ಆದೇಶಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚವಾವಣೆ ಫಲಿತಾಂಶ ಹೊರಬಿದ್ದ ಹಿನ್ನೆಲೆ, ಸಂಭ್ರಮಾಚರಣೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಹುನಗುಂದ ತಹಶಿಲ್ದಾರ ಸುಭಾಶ್ ಸಂಪಗಾವಿಯವರು ಮುಂಜಾಗ್ರತಾ ಕ್ರಮ ವಹಿಸಿ ಈ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಬರುವ 5ನೇ ತಾರೀಖಿನ 6 ಗಂಟೆಯವರೆಗೂ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ಹುನಗುಂದ ಪಟ್ಟಣ ಹಾಗು ಇಳಕಲ್ ನಗರದಲ್ಲಿ ಮೆರವಣಿಗೆ, ಪಟಾಕಿ‌ ಸಿಡಿಸಿ ವಿಜಯೋತ್ಸವ ಆಚರಿಸಿದಂತೆ ಸೂಚಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

144 tahsildar ಇಳಕಲ್ ಪಟಾಕಿ‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ