ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಸೊಸೆ

former vice presidents family lodge a complaint 2 police officers

03-09-2018

ಬೆಂಗಳೂರು: ಕಳೆದ 2017ರ ಮೇ ನಲ್ಲಿ ನಡೆದಿದ್ದ ಚರಂಡಿ ಸಂಸ್ಕರಣಾ ಘಟಕದಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಿ ಹಣ ಆಸ್ತಿಗಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವೈಟ್‍ ಫೀಲ್ಡ್ ಎಸಿಪಿ ಹಾಗೂ ಪೊಲೀಸ್ ಸಬ್‍ ಇನ್ಸ್ಪೆಕ್ಟರ್ ವಿರುದ್ಧ ಮಾಜಿ ಉಪ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ಸೊಸೆ ಲಕ್ಷ್ಮೀ ಜತ್ತಿ ಅವರು ಉಪ ಪೊಲೀಸ್ ಆಯುಕ್ತ(ಡಿಸಿಪಿ)ಗೆ ದೂರು ನೀಡಿದ್ದಾರೆ.

ವೈಟ್‍ ಫೀಲ್ಡ್ ಎಸಿಪಿ ಸುಧಾಮ ನಾಯಕ್ ಮತ್ತು ಸಬ್‍ ಇನ್ಸ್ಪೆಕ್ಟರ್ ಸೋಮಶೇಖರ್ ವಿರುದ್ಧ ಲಕ್ಷ್ಮೀ.ಡಿ.ಜತ್ತಿ ಅವರು ದೂರು ನೀಡಿದ್ದಾರೆ. ದೂರಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ವೈಟ್‍ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿದ್ದಾರೆ.

ಘಟನೆಯ ವಿವರ: ಕಳೆದ 2017ರ ಮೇ24 ರಂದು ವೈಟ್ ಫೀಲ್ಡ್ ನ ದ್ವಾರಕಾಮಯಿ ಲೇಔಟ್‍ನ ಚರಂಡಿ ಸಂಸ್ಕರಣಾ ಘಟಕದಲ್ಲಿ ಸ್ವಚ್ಛಗೊಳಿಸಲು ಬಂದಿದ್ದ ಇಬ್ಬರು ಕಾರ್ಮಿಕರಲ್ಲಿ ಓರ್ವ ಉಸಿರುಗಟ್ಟಿ ಮೃತಪಟ್ಟರೆ ಮತ್ತೊಬ್ಬ ಗಾಯಗೊಂಡಿದ್ದನು ಪ್ರಕರಣದ ತನಿಖೆ ನಡೆಸುವಾಗ ಎಸಿಪಿ 5 ಲಕ್ಷ ಮತ್ತು ಸೋಮಶೇಖರ್ 2 ಲಕ್ಷ ರೂ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವಾಗ, ತಮ್ಮ ಹೆಸರು ಸೇರಿಸುವುದಿಲ್ಲ ಎಂದು ಹೇಳಿದ್ದ ಅವರಿಬ್ಬರು ಆರೋಪಪಟ್ಟಿಯಲ್ಲಿ ನಮ್ಮ ಹೆಸರು ಸೇರಿಸಿದ್ದಾರೆ. ಪ್ರಕರಣ ಅಂತ್ಯಗೊಳಿಸಲು ಎಸಿಪಿ ಮತ್ತಷ್ಟು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಲಕ್ಷ್ಮಿ ಜತ್ತಿ ಅವರು ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲು ಹೋಗಿದ್ದು ಅವರನ್ನು ವೈಟ್‍ಫೀಲ್ಡ್ ಡಿಸಿಪಿ ಬಳಿಗೆ ಕಳುಹಿಸಲಾಗಿತ್ತು.

ಜಾತಿ ನಿಂದನೆ ಕೇಸ್: ದೂರಿನ ಸಂಬಂಧ ವೈಟ್ ಫೀಲ್ಡ್ ಪೊಲೀಸರನ್ನು ಸಂಪರ್ಕಿಸಿದಾಗ ಜತ್ತಿ ದಂಪತಿ ಪೊಲೀಸರ ವಿರುದ್ಧ ತಪ್ಪು ಆರೋಪ ಮಾಡುತ್ತಿದ್ದಾರೆ, ಹೀಗಾಗಿ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ದಂಪತಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ