ಮೆಚ್ಚುಗೆಗೆ ಪಾತ್ರವಾದ ಟ್ರಾಫಿಕ್ ಪೊಲೀಸ್

A traffic police helped A handicapped senior citizen

03-09-2018

ಬೆಂಗಳೂರು: ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಬಂದಿದ್ದ  ಹಿರಿಯ ನಾಗರಿಕರೊಬ್ಬರನ್ನು ಸಂಚಾರ ಪೊಲೀಸ್ ಪೇದೆಯೊಬ್ಬರು ಎತ್ತಿಕೊಂಡು ಹೋಗುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಶೋಕ್ ನಗರ ಸಂಚಾರ ಠಾಣೆ ಪೊಲೀಸ್ ಪೇದೆ ಬಾಲಾಜಿ ನಾಯಕ್ ಹಿರಿಯ ನಾಗರೀಕರನ್ನು ಎತ್ತಿಕೊಂಡು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು  ಸಮಾಜಿಕ ಜಾಲತಾಣದಲ್ಲಿ ಇದು ಹರಿದಾಡುತ್ತಿದೆ.

ಪೇದೆ ಬಾಲಾಜಿ ಕಾರ್ಯಕ್ಕೆ ಡಿಸಿಪಿ ರವಿ ಡಿ.ಚನ್ನಣ್ಣನವರ್, ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಧ್ಯರಾತ್ರಿ ಸುಮಾರು 12ಗಂಟೆವರೆಗೂ ಜನತಾ ದರ್ಶನವನ್ನು ಮಾಡಿದ್ದರು. ಈ ಸಿಎಂ ಜನತಾ ದರ್ಶನಕ್ಕೆ ಹಿರಿಯ ನಾಗರೀಕರಾದ ಯೂಸುಫ್ ವ್ಯಕ್ತಿ ಆಟೋದಲ್ಲಿ ಒಬ್ಬರೇ ಆಗಮಿಸಿದ್ದರು. ಯೂಸುಫ್ ಅವರಿಗೆ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಇದರಿಂದ ಅವರಿಗೆ ನಿಲ್ಲಲೂ ಆಗುತ್ತಿರಲಿಲ್ಲ, ಇದನ್ನು ಗಮನಿಸಿದ ಪೇದೆ ಅವರನ್ನು ಎತ್ತಿಕೊಂಡು ಹೋಗಿ ಆಟೋಗೆ ಹತ್ತಿಸಿ ಮನೆಗೆ ಕಳುಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police H.D.kumaraswamy ಡಿಸಿಪಿ ಜಾಲತಾಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ