ವಸತಿ ಶಿಬಿರದಲ್ಲಿ ಗಣ್ಯರ ಸಂವಾದ

Santosh Hegde in samooha shakti

03-09-2018

ಬೆಂಗಳೂರು: ಸಮೂಹ ಶಕ್ತಿ ವತಿಯಿಂದ ಎರಡು ದಿನಗಳ ಕಾಲ ಬೆಂಗಳೂರಿನ ಜಯನಗರದ ಟಿ ಬ್ಲಾಕ್ ನ ಗಂಗಮ್ಮದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಸತಿ ಶಿಬಿರದಲ್ಲಿ, ಉದ್ಘಾಟನಾ ಭಾಷಣಾಕಾರರಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಭಾಗವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಸಂವಿಧಾನ ಮಹತ್ವ, ನ್ಯಾಯಾಂಗದ ಮಹತ್ವ ಮತ್ತು  ನಾಗರರೀಕರ ಜವಾಬ್ದಾರಿ ಬಗ್ಗೆ ಮಾತನಾಡಿದರು. ನಂತರದ ಅವಧಿಯನ್ನು ಖ್ಯಾತ ವಕೀಲ ದಿವಾಕರ್ ಅವರು ನಡೆಸಿಕೊಟ್ಟರು.

ಮಧ್ಯಾಹ್ನದ ಮೇಲೆ ಮುಂದುವರೆದ ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ವಕೀಲರಾದ ಮೋಹನ್ ಕುಮಾರ್ ಅವರು ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಭಾನುವಾರದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಹಿರಿಯ ಸಂಪಾದಕರಾದ ಆರ್.ಹೆಚ್.ನಟರಾಜ್ ಅವರು ಮಾಧ್ಯದ ಬಗ್ಗೆ ಸಂವಾದ ನಡೆಸಿದರು. ಸಂವಾದದಲ್ಲಿ ಪ್ರಸ್ತುತ ಮಾಧ್ಯಮ, ನವ ಮಾಧ್ಯಮ ಮತ್ತು ಮಾಧ್ಯಮದ ಇತರೆ ವಿಚಾರಗಳ ಬಗ್ಗೆ ಚರ್ಚಿಸಿದರು. ಆನಂತರ ಆನೇಕಲ್ ವಿಭಾಗದ ಡಿವೈಎಸ್ಪಿ ಎಸ್.ಕೆ.ಉಮೇಶ್ ಅವರು ಪೊಲೀಸ್ ಇಲಾಖೆ ಬಗ್ಗೆ ಒಂದು ಅವಧಿಯನ್ನು ನಡೆಸಿಕೊಟ್ಟರು.

ಮಧ್ಯಾಹ್ನದ ನಂತರ ಖ್ಯಾತ ಹೋರಾಟಗಾರ ಹಾಗು ಸಮಾಜ ಪರಿವರ್ತನಾ ಸಮಾಜದ ರಾಜ್ಯ ಸಂಚಾಲಕ ಎಸ್.ಆರ್.ಹಿರೇಮಠ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದರ ಮಧ್ಯದ ಅವಧಿಗಳಲ್ಲಿ ಸಮೂಹ ಶಕ್ತಿಯ ಮುಖ್ಯ ಪ್ರೇರಕರಾದ ಖ್ಯಾತ ಮಾಧ್ಯಮ ವ್ಯಕ್ತಿ ದೀಪಕ್ ತಿಮ್ಮಯ ಅವರು ನಡೆಸಿಕೊಟ್ಟರು.

ಸುಮಾರು 5-6 ತಾಲ್ಲೂಕುಗಳಿಂದ ಬಂದಿದ್ದ ಶಿಬಿರಾರ್ಥಿಗಳು ನಾಯಕತ್ವ, ಸಬಲೀಕರಣ, ಮಾಹಿತಿಯ ಮಹತ್ವ, ರಾಜಕಾರಣ, ಆಡಳಿತ, ಕಾನೂನು ಮತ್ತು ಸರ್ಕಾರಿ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡು ಪ್ರಯೋಜನವನ್ನೂ ಪಡೆದುಕೊಂಡರು.

ಅಭ್ಯರ್ಥಿಗಳಿಗೆ ಉಚಿತ ಪ್ರಯಾಣದೊಂದಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ಒದಗಿಸಲಾಗಿತ್ತು.


ಸಂಬಂಧಿತ ಟ್ಯಾಗ್ಗಳು

samooha shakti Santosh Hegde ಭಾಷಣ ಎಸ್.ಆರ್.ಹಿರೇಮಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಸಮೂಹ ಶಕ್ತಿ ಕಡೆಯಿಂದ ವಸತಿ ಶಿಬಿರ ಏರ್ಪಡಿಸಿ ಯುವಕಶಕ್ತಿ ನಾಗರಿಕರಿಗೆ, ಸಾಮಾಜಿಕ ವ್ಯವಸ್ಥೆಯಲ್ಲಿ ನಾಗರಿಕರ ಪಾತ್ರ,ವ್ಯಕ್ತಿತ್ವ ವಿಕಾಸನ ,ಪರಿಸರ ಸಂರಕ್ಷಣೆ, ನೈರ್ಮಲ್ಯ ಕಾಪಾಡುವ ಜವಾಬ್ದಾರಿ, ಹಕ್ಕುಗಳು &ಕರ್ತವ್ಯ ,ಇತರೆ ವಿಷಯದ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿಕೊಡುವುದು ಮಹತ್ವದ ಜವಾಬ್ದಾರಿ ಇದೇ ರೀತಿ ಮುಂದುವರೆಸಿ ಶ್ರೇಯೋಭಿವೃದ್ದಿ ಹೊಂದಲು ನಾವು ನೀವು ಸಮೂಹಶಕ್ತಿಯೊಂದಿಗೆ ಕೈ ಜೋಡಿಸೋಣ
  • Manjunath ac
  • Member samuha shakthi