ಮತ ಎಣಿಕೆ ಕೇಂದ್ರದ ಮುಂದೆ ಗೊಂದಲ!

# udui local body election #vote counting booth

03-09-2018

ಉಡುಪಿ: ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗಿನಿಂದ ಬಿರುಸಿನಿಂದ ನಡೆಯುತ್ತಿದೆ. ಉಡುಪಿಯಲ್ಲಿ ಮತ ಎಣಿಕಾ ಕೇಂದ್ರಕ್ಕೆ ಅಭ್ಯರ್ಥಿಗಳನ್ನು ವಿಳಂಬವಾಗಿ ಒಳ ಬಿಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಏಜೆಂಟರು. ಮತ ಎಣಿಕೆ ಕೇದ್ರದ ಮುಂದೆ ಬಿಸಿಲಿಗೆ ಅಭ್ಯರ್ಥಿಗಳು, ಏಜೆಂಟರು, ಸ್ಥಳೀಯರು, ಕಾರ್ಯಕರ್ತರು ಸುಸ್ತಾಗಿದ್ದಾರೆ. ಕನಿಷ್ಟ ಶಾಮಿಯಾನವನ್ನೂ ವ್ಯವಸ್ಥೆ ಮಾಡಿಲ್ಲ ಜಿಲ್ಲಾಡಳಿತ ಎಂದು ಕಿಡಿಕಾರಿದ್ದಾರೆ. ಈ ವಿಚಾರವಾಗಿ ಮತ ಎಣಿಕಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ಕುರಿತು ಕೇಳಿದರೆ ಅನುದಾನದ ಕೊರತೆ ಎನ್ನುತ್ತಿದ್ದಾರೆ ಎಂದು ಮತ ಎಣಿಕೆ  ಕೇಂದ್ರದ ಬಳಿ ಇದ್ದವರು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

vote counting ಬಿಸಿಲು ಮತ ಎಣಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ