ವದಂತಿಗೆ ತೆರೆ: ಬ್ಯಾಂಕುಗಳಿಗೆ ಸಾಲು ಸಾಲು ರಜೆ ಇಲ್ಲ

Next week banks working as usual

31-08-2018

ನವದೆಹಲಿ: ಬ್ಯಾಂಕ್ ಗಳಿಗೆ ಮುಂದಿನ ವಾರ ಸಾಲು-ಸಾಲು ರಜೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗೆ ಸರ್ಕಾರ ತೆರೆ ಎಳೆದಿದೆ. ಈ ಮಾಹಿತಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದ್ದು,  ಮುಂದಿನ ವಾರ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಯಾವುದೇ ರಜಾ ಇರುವುದಿಲ್ಲ ಎಂದು ಹೇಳಿದೆ. ಸೆಪ್ಟೆಂಬರ್ 3ರಂದು ಶ್ರೀ ಕೃಷ್ಣ ಜನ್ಮಷ್ಟಾಮಿಗೆ ಸಾರ್ವಜನಿಕ ರಜೆ ಇಲ್ಲ. ಕೆಲವು ರಾಜ್ಯಗಳು ಮಾತ್ರ ರಜಾ ಘೋಷಿಸಿವೆ ಎಂದು ತಿಳಿಸಿದೆ. ಇದನ್ನು ಹೊರತುಪಡಿಸಿ ಸೆಪ್ಟೆಂಬರ್ 2 ಭಾನುವಾರ, ಹಾಗೂ ಸೆಪ್ಟೆಂಬರ್ 8 ಎರಡನೇ ಶನಿವಾರ ಆದ ಕಾರಣ ಈ ಎರಡು ದಿನಗಳು ಮಾತ್ರ ಬ್ಯಾಂಕುಗಳಿಗೆ ರಜಾ ಇರುತ್ತದೆ ಎಂದು ಸಚಿವಾಲಯ ಹೇಳಿದೆ.


ಸಂಬಂಧಿತ ಟ್ಯಾಗ್ಗಳು

finance ministry Banks ಸ್ಪಷ್ಟನೆ ಸಾರ್ವಜನಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ