ಮತಗಟ್ಟೆ ಬಳಿ ಸ್ಥಳೀಯ ಮುಖಂಡನಿಗೆ ಲಾಠಿ ಏಟು!

Police lathi charge on voting booth near bidar

31-08-2018

ಬೀದರ್: ಸ್ಥಳೀಯ ಚುನಾವಣೆ ಹಿನ್ನೆಲೆ ಜಿಲ್ಲೆಯ ಹಳಿಖೇಡ ಪುರಸಭೆಗೆ ಮತದಾನದ ವೇಳೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಹೇಳುತಿದ್ದ ವ್ಯಕ್ತಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಹಳಿಖೇಡದ 14ನೇ ಮತದಾನ ಕೇಂದ್ರದ ಬಳಿ ಮತದಾರರ ಮೇಲೆ ಪ್ರಭಾವ ಬೀರುತಿದ್ದ ಹಾಕೀಮ್ ನನ್ನು ಪೊಲೀಸರು ಎಚ್ಚರಿಸಿದ್ದರು. ಪೊಲೀಸರು ಹೇಳಿದರೂ ಸುಮ್ಮನಾಗದಿದ್ದು ಮತ್ತೂ ಅದನ್ನೇ ಮಾಡುತ್ತಿದ್ದರಿಂದ ಆತನನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ. ಹಾಕೀಮ್ ಹಳಿಖೇಡದ ಕಾಂಗ್ರೆಸ್ ಮುಖಂಡ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

voting Bidar ಮತದಾರ ಪ್ರಭಾವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ