ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ: ಸುರೇಶ್ ಕುಮಾರ್

BJP leader suresh kumar angry on prabha belavangala post in facebook

31-08-2018

ಬೆಂಗಳೂರು: ವಿಶ್ವ ವಿಖ್ಯಾತ ದಸರಾ ಉದ್ಘಾಟನೆಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರನ್ನು ಆಹ್ವಾನಿಸಿರುವ ಬೆನ್ನಲ್ಲೇ, ಎಡಪಂಥೀಯ ವಿಚಾರಧಾರೆಯುಳ್ಳ ಪ್ರಗತಿಪರ ಚಿಂತಕಿ ಪ್ರಭಾ ಎನ್.ಬೆಲವಂಗಲ ಅವರು ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಬರಹದ ಪೋಸ್ಟ್ ಒಂದನ್ನು ಹಾಕಿದ್ದಾರೆ. ‘ದುಡ್ಡು ಮಾಡಿ ನಾಜೂಕಿನ ಮಾತು ಕಲಿತುಬಿಟ್ರೆ ದಸರಾ ಉದ್ಘಾಟನೆ ಮಾಡಬಹುದು’ ಎಂಬ ವಿವಾದಾತ್ಮಕ ಪೋಸ್ಟ್ ಇದೀಗ ಸಾಮಾಜಿ ಜಾಲತಾಣದಲ್ಲಿ ಭಾರೀ ಚರ್ಚಗೆ ಗ್ರಾಸವಾಗಿದೆ. ಈ ಪೋಸ್ಟ್ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರೂ ಕೂಡ ಟೀಕಿಸಿದ್ದಾರೆ. ಟ್ವಿಟರ್ ನಲ್ಲಿ ಟೀಕಿಸಿದ ಶಾಸಕ ಸುರೇಶ್ ಕುಮಾರ್, ‘ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ’ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇತರೆ ನೆಟ್ಟಿಗರಿಂದಲೂ ಪ್ರಭಾ ಬೆಲಂಗಲ ಪೋಸ್ಟ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Sudha Murthy prabha belavangala ಫೇಸ್ ಬುಕ್ ಟ್ವಿಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ