ರಾಜ್ಯ ಸರ್ಕಾರ ಸುಭದ್ರ ಎಂದಿದ್ದಾರೆ ದೇವೇಗೌಡರು

Deve Gowda said the state government was safe

31-08-2018

ಬೆಂಗಳೂರು: ಬೇರೆ ಬೇರೆ ರಾಜ್ಯಗಳಲ್ಲಿ ರಾಜಕೀಯ ವ್ಯವಸ್ಥೆ ಹೇಗಿದೆ ಎಂದು ತಿಳಿಯಲು ಬ್ರಿಟಿಷ್ ಹೈಕಮಿಷನ್ ನವರು ಬರುತ್ತಾರೆ. ಕರ್ನಾಟಕದಲ್ಲಿ ಕೆಲವು ಗೊಂದಲಗಳಿವೆ ಅಂತ ಮಾಧ್ಯಮಗಳಿಂದ ತಿಳಿದು ಇಲ್ಲಿಗೆ ಬಂದಿದ್ದರು. ಸರ್ಕಾರ ಬಿದ್ದು ಹೋಗುತ್ತದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದವು. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಲು ಜೆಡಿಎಸ್ ಹಾಗೂ ಕಾಂಗ್ರೆಸ್ ಇಬ್ಬರೂ ಸಿದ್ಧರಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಪಡೆದು ಹೋಗಿದ್ದಾರೆ.

ದೇಶಪಾಂಡೆ ಕೂಡಾ ಸಿಎಂ ಅಭ್ಯರ್ಥಿ ಅನ್ನೋದು ಹಳೇ ವಿಚಾರ. ಧರ್ಮ ಸಿಂಗ್ ಸಿಎಂ ಆದಾಗಲೇ ಅಂತಹ ಪ್ರಸ್ತಾಪ ಬಂದಿತ್ತು. ಕುಮಾರಸ್ವಾಮಿ ಹೇಳಿದ್ದು ದೇಶಪಾಂಡೆ ಅವರಿಗೂ ಅರ್ಹತೆ ಇದೆ ಅಂತ ಅಷ್ಟೇ, ಅದರಲ್ಲಿ ಅಂತಾ ವಿಶೇಷ ಏನೂ ಇಲ್ಲ. ಹೆಗ್ಡೆ ಸಂಪುಟದಲ್ಲಿ ನಾನು ಕೂಡ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ