ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು !

Kannada News

01-06-2017 380

ಬೆಂಗಳೂರು :-ನಗರದ ಹುಳಿಮಾವು ಸಮೀಪದ  ಇಸ್ರೋ ಲೇಔಟ್‍ನಲ್ಲಿ ಬುಧವಾರ ರಾತ್ರಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಫ್ಲಿಪ್ ಕಾರ್ಟ್‍ನ ಸೀನಿಯರ್ ಮ್ಯಾನೇಜರ್ ಮೃತಪಟ್ಟಿದ್ದಾರೆ. ಶ್ರೀನಗರದ ಮಧುಸೂದನ್(38)ಮೃತ ವ್ಯಕ್ತಿ, ರಾತ್ರಿ 9.30ರ ವೇಳೆ ಮಧುಸೂದನ್ ಅವರು ಕೆಲಸ ಮುಗಿಸಿ ಪಲ್ಸರ್ ಬೈಕ್‍ನಲ್ಲಿ ಇಸ್ರೋ ಲೇಔಟ್‍ನ 3ನೇ ಮುಖ್ಯರಸ್ತೆಯಲ್ಲಿ ಬರುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಕೆಳಗೆಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಸಂಚಾರ ಪೊಲೀಸರು ಲಾರಿ ಚಾಲಕ ರಾಜೇಂದ್ರರೆಡ್ಡಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ