ಇದೀಗ ಎಲ್ಲರ ಚಿತ್ತ ಸಮನ್ವಯ ಸಮಿತಿ ಸಭೆಯತ್ತ!

Congress-JDS coordination committee meeting today

31-08-2018

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆ ಇಂದು ಸಂಜೆ 6 ಗಂಟೆಗೆ ನಡೆಯಲಿದೆ. ತರಾತುರಿಯಲ್ಲಿ ಮೈತ್ರಿ ಸರ್ಕಾರದ‌ ಡ್ಯಾಮೇಜ್ ಕಂಟ್ರೋಲ್ ಮಾಡಲು ಆತುರದ ಸಭೆ ಕರೆಯಲಾಗಿದ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಫಾರಿನ್ ಟೂರ್ ಹೋಗುವ ಮುನ್ನ ಸಭೆ ಕರೆದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಮನ್ವಯ ಸಮಿತಿ ಸದಸ್ಯ ಡ್ಯಾನಿಷ್ ಅಲಿ ಒತ್ತಾಯದ ಮೇರೆಗೆ ಸಂಜೆ ಕುಮಾರ ಕೃಪದಲ್ಲಿ ಸಭೆ ನಡಯುತ್ತಿದೆ ಎನ್ನಲಾಗಿದ್ದು, ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ‘ಮತ್ತೆ ನಾನೇ ಸಿಎಂ’ ಎಂಬ ಹೇಳಿಕೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮಿತಿ ಸದಸ್ಯರಾಗಿ ಸೇರ್ಪಡೆ ವಿಚಾರ ಸೇರಿದಂತೆ ಸಿದ್ದರಾಮಯ್ಯನವರ ಇತರೆ ಹೇಳಿಕೆಗಳು, ಕಾಂಗ್ರೆಸ್ ಶಾಸಕರ ಹೇಳಿಕೆಗಳು, ವರ್ಗಾವಣೆ ಗೊಂದಲ, ಸಿಎಂ ಕುಮಾರಸ್ವಾಮಿ ಏಕಪಕ್ಷೀಯ ನಿರ್ಧಾರಗಳು, ಲೋಕಸಭೆ ಚುನಾವಣೆ ಮೈತ್ರಿ, ನಿಗಮ ಮಂಡಳಿ, ಸಂಪುಟ ವಿಸ್ತರಣೆ ವಿಷಗಳು ಸಮನ್ವಯ ಸಮಿತಿ ಸಭೆಯಲ್ಲಿ ಮುನ್ನೆಲೆಗೆ ಬರಲಿವೆ ಎಂದು ಹೇಳಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ