ಮೇಕೆದಾಟು ಯೋಜನೆಗೆ ಮೊದಲ ಆದ್ಯತೆ: ಡಿಕೆಶಿ

First preference to Mekedatu project: DKS

30-08-2018

ಬೆಂಗಳೂರು: ನಾಲೆಗಳಿಂದ ನೀರು ಕಳ್ಳತನ ಮಾಡುವುದನ್ನು ತಡೆಯಲು ಕೆಇಬಿ ಮಾದರಿ ವಿಚಕ್ಷಣ ದಳ ರಚನೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲ ಶಾಸಕರು ಕೆಲ ಪ್ರದೇಶಗಳಿಗೆ ನೀರು ಸರಿಯಾಗಿ ಹೋಗುತ್ತಿಲ್ಲ ಅಂತ ದೂರು ನೀಡಿದ್ದಾರೆ. ಅಚ್ಚುಕಟ್ಟು ಪ್ರದೇಶಕ್ಕೆ ನಾಲೆ ನೀರು ಹೋಗುತ್ತಿಲ್ಲ. ಅದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ವಿಚಕ್ಷಣಾ ದಳವನ್ನು ರಚಿಸಲಿದ್ದೇವೆ. ಈ ಸಂಬಂಧ ಶೀಘ್ರದಲ್ಲಿ ಗೃಹ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆ ಅಧಿಕಾರಗಳ ಜೊತೆ ಸಭೆ ನಡೆಸಲಿದ್ದೇವೆ. ನಾಲೆಗಳಿಗೆ ನೀರು ಬಿಡುವ ಸಮಯದಲ್ಲಿ ಅಕ್ರಮ ನೀರು ಪಡೆದಿರುವುದು, ಅಕ್ರಮ ಸಂಪರ್ಕ ಹೊಂದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪೊಲೀಸ್ ಟೀಂ ಒಂದನ್ನು ರಚನೆ ಮಾಡಲಾಗುವುದು. ಪ್ರತಿ ನಾಲೆಗೆ ಭದ್ರತೆ ನೀಡುವ ಕುರಿತು ಚರ್ಚೆ ಮಾಡಲಾಗಿದೆ. ಗೃಹ ಸಚಿವರ ಜೊತೆ ಚರ್ಚೆ ಮಾಡಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆಗೆ ಮೊದಲ ಆದ್ಯತೆ: ನಮ್ಮ ಸರ್ಕಾರ ಮೊದಲ ಆದ್ಯತೆ ಮೇಕೆದಾಟು ಯೋಜನೆಗೆ ನೀಡಲಿದೆ ಎಂದು ಸಚಿವ ಡಿಕೆಶಿ ತಿಳಿಸಿದರು. ಮೇಕೆದಾಟು ಯೋಜನೆ ಸಂಬಂಧ ಸಂಪೂರ್ಣ ಮಾಹಿತಿ ಕೇಂದ್ರಕ್ಕೆ ಕಳಿಸಿಕೊಡುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಸದ್ಯದಲ್ಲೆ ಯೋಜನೆ ಬಗ್ಗೆ ನಾವೇ ಪ್ರಾತ್ಯಕ್ಷಿಕೆ ನೀಡಲಿದ್ದೇವೆ. ಇದರಲ್ಲಿ ನಮಗಿಂತ ತಮಿಳಿನಾಡಿಗೆ ಹೆಚ್ಚು ಲಾಭ ಇದೆ. ಮೇಕೆದಾಟಿನಿಂದ ಎರಡು ರಾಜ್ಯಕ್ಕೂ ಲಾಭ ಇದೆ. ಸರ್ಕಾರದ ಸಂಕಲ್ಪ ಮೇಕೆದಾಟು ಯೋಜನೆ ಮಾಡಬೇಕು ಅನ್ನೋದು. ತಮಿಳುನಾಡಿಗೂ ಮೇಕೆದಾಟಿನ ಬಗ್ಗೆ ಅರ್ಥ ಆಗಿದೆ. ಎರಡು ರಾಜ್ಯದ ರೈತರು ಒಂದೇ ಆಗಿದ್ದು, ಹೀಗಾಗಿ ತಮಿಳುನಾಡು ಕೂಡಾ ಇದಕ್ಕೆ ಒಪ್ಪಿಕೊಳ್ಳುವ ವಿಶ್ವಾಸ ಇದೆ ಎಂದು ವಿವರಿಸಿದರು.


ಸಂಬಂಧಿತ ಟ್ಯಾಗ್ಗಳು

D.K.Shivakumar Mekedatu ಯೋಜನೆ ವಿಧಾನಸೌಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ