ಮಾಗಡಿ ರೋಡ್ ಕೃಷ್ಣ ಆಯ್ತು..ಈಗ ಟ್ಯಾಂಗೋ..!

police arrested A Rowdy ravikumar alias tango!

30-08-2018

ಬೆಂಗಳೂರು: ಕೊಲೆ, ಕೊಲೆಯತ್ನ, ಸುಲಿಗೆ ಸೇರಿ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕಖ್ಯಾತ ರೌಡಿ ರವಿಕುಮಾರ್ ಅಲಿಯಾಸ್ ಟ್ಯಾಂಗೋನನ್ನು ಗೂಂಡಾ ಕಾಯ್ದೆಯಡಿ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಟ್ಯಾಂಗೋ ವಿರುದ್ಧ ನಗರದ ಬಸವೇಶ್ವರ ನಗರ, ಚಂದ್ರಾ ಲೇಔಟ್ ಇನ್ನಿತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಸುಲಿಗೆ, ದರೋಡೆ ಸೇರಿ 15ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ  ಭಾಗಿಯಾಗಿದ್ದಾನೆ ಎಂದು ಡಿಸಿಪಿ ರವಿ ಚೆನ್ನಣ್ಣವರ್ ತಿಳಿಸಿದ್ದಾರೆ.

ಪದೇ ಪದೆ ಅಪರಾಧ ಕೃತ್ಯಗಳನ್ನು ಎಸಗುತ್ತಾ ಸಾರ್ವಜನಿಕರ ನೆಮ್ಮದಿ ಭಂಗ ತರುತ್ತಿದ್ದ ಟ್ಯಾಂಗೋನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಮೂರು ದಿನಗಳ ಹಿಂದೆ ರೌಡಿ ಮಾಗಡಿ ರೋಡ್ ಕೃಷ್ಣನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು.


ಸಂಬಂಧಿತ ಟ್ಯಾಗ್ಗಳು

Rowdy arrested ಸುಲಿಗೆ ದರೋಡೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ