ಬೆಟ್ಟದಿಂದ ಜಾರಿ ಬಿದ್ದು ಯುವಕನ ಸಾವು

A man fell down from a hill and died

30-08-2018

ಬೆಂಗಳೂರು: ರಾಮನಗರದ ಅವ್ವೇರಹಳ್ಳಿಯ ಐತಿಹಾಸಿಕ ರೇವಣ ಸಿದ್ದೇಶ್ವರ ಬೆಟ್ಟದಿಂದ ಕಾಲು ಜಾರಿ ಬಿದ್ದು ನಗರದ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬ್ಯಾಡರಹಳ್ಳಿ ನಿವಾಸಿ ಭರತ್ (28)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಏಕಶಿಲಾ ಬೆಟ್ಟವಾಗಿರುವ ರೇವಣಸಿದ್ದೇಶ್ವರ ಬೆಟ್ಟದ ವೀಕ್ಷಣೆಗೆಂದು ನಾಲ್ಕು ಜನ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಬೆಟ್ಟ ಹತ್ತುತ್ತಿರುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಭರತ್ ಸುಂಕದಕಟ್ಟೆಯ ಎಲ್.ಜಿ.ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ರಾಮನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

revana siddeshwara temple ಗ್ರಾಮಾಂತರ ವೀಕ್ಷಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ