‘ಕೈ’ ತೊರೆದು 'ಕಮಲ' ಹಿಡಿದ ಬಾಬುರಾವ್ ಚಿಂಚನಸೂರ್

Senior Karnataka Congress leader Baburao Chinchansur joins BJP

29-08-2018

ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ‌ ಸಚಿವ ಬಾಬುರಾವ್ ಚಿಂಚನಸೂರ್ ಹಾಗು ಅವರ ಪತ್ನಿ ಅಮರೇಶ್ವರಿ ಬಾಬು ಚಿಂಚನಸೂರ್ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಇಂದು ಸೇರ್ಪಡೆಯಾದರು. ಬಿಜೆಪಿ ಸೇರಿದ ನಂತರ ಮಾತನಾಡಿದ ಬಾಬೂರಾವ್ ಚಿಂಚನಸೂರು, ಕುತಂತ್ರದಿಂದ ನನ್ನನ್ನು ಈ ಬಾರಿ ಸೋಲಿಸಿದರು. ಕಿತ್ತೂರು ಚೆನ್ನಮ್ಮನ ಸೋಲಿಸಿದಂತೆ ನಮ್ಮವರೇ ನಮ್ಮನ್ನು ಸೋಲಿಸಿದರು. ನನ್ನ ಸೋಲಿಗೆ ಬಿಜೆಪಿ, ದಳ ಕಾರಣವಲ್ಲ ಐದು ಬಾರಿ ಗೆದ್ದಿದ್ದ ನನ್ನ ಜನಪ್ರಿಯತೆ ಸಹಿಸದೆ ಕಾಂಗ್ರೆಸ್ ನವರೇ ನನ್ನನ್ನು ಸೋಲಿಸಿದರು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶೇ.46 ಜನ ನಮ್ಮ ಸಮುದಾಯದವರಿದ್ದಾರೆ. ಒಗ್ಗಟ್ಟಾಗಿ ನಿಲ್ಲಲಿದ್ದೇವೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆ ಎಂದು ಯಡಿಯೂರಪ್ಪಗೆ ವಚನ ನೀಡುತ್ತಿರುವುದಾಗಿ ತಿಳಿಸಿದರು.

ಮಾಲೀಕಯ್ಯ‌ ಗುತ್ತೇದಾರ್ ಮಾತನಾಡಿ, ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಸೋಲಿಸಿದ್ದಾರೆ. ಕಪ್ಪುಚುಕ್ಕೆ ಇಲ್ಲದ ನಮ್ಮ ಜನಪ್ರಿಯತೆ ನೋಡಿ ನಮ್ಮನ್ನ ಸೋಲಿಸಬೇಕು ಅಂತಾ ಸೋಲಿಸಿದರು. ಸ್ವಾರ್ಥದಲ್ಲೇ ಪಕ್ಷ ನಡೆಯಬೇಕು ಎನ್ನುವುದು ಅವರ ಆಶಯ. ಅವರ ಪುತ್ರನನ್ನು ಗೆಲ್ಲಿಸಿ ಮಂತ್ರಿ ಮಾಡಿದ್ದಾರೆ. ಇವತ್ತು ಚಿಂಚನಸೂರು ಸೋಲಿಗೆ ಕಾಂಗ್ರೆಸ್ ಕಾರಣ, ಎಲ್ಲರೂ ನಮ್ಮ‌ಮನೆ ಮುಂದೆ ಬಂದು ನಿಲ್ಲಬೇಕು ಎನ್ನುವುದೇ ಅವರ ಅಪೇಕ್ಷೆ, ಅದಕ್ಕೆ‌ ನಾವು ಪಕ್ಷ ತೊರೆದು ಬಿಜೆಪಿ ಸೇರಿದ್ದೇವೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿಯಲ್ಲಿ  ಬಿಜೆಪಿ‌ ವಿಜಯ ಪತಾಕೆ ಹಾರಿಸಲಿದೆ. ನಾವಿಬ್ಬರು ಬಂದ ಮೇಲೆ ಅವರು ನಿಲ್ತಾರೋ ಇಲ್ಲೋ ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆಗೆ ಪರೋಕ್ಷ ಟಾಂಗ್ ನೀಡಿದರು.


ಸಂಬಂಧಿತ ಟ್ಯಾಗ್ಗಳು

Baburao Chinchansur yeddyurappa ಚುನಾವಣೆ ಸಮುದಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ