ನಾಗರಿಕ ಸೇವಾ ಪರೀಕ್ಷೆ ಕೋಲಾರದ ನಂದಿನಿಗೆ ಮೊದಲ ಸ್ಥಾನ !

Kannada News

01-06-2017

ಕೇಂದ್ರ ಲೋಕಸೇವಾ ಆಯೋಗವು 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷಾ (ಸಿಎಸ್‌ಇ) ಫಲಿತಾಂಶವನ್ನು ಪ್ರಕಟಿಸಿದೆ. ರಾಜ್ಯದ ಕೋಲಾರ ಜಿಲ್ಲೆಯ ಕೆ.ಆರ್‌. ನಂದಿನಿ ಮೊದಲ ಸ್ಥಾನ ಪಡೆದಿದ್ದಾರೆ. ದೇಶದ ಅತೀ ಕಷ್ಟದ ಪರೀಕ್ಷೆ ಎಂದೇ ಗುರುತಿಸಿಕೊಂಡಿರುವ ಐ.ಎ.ಎಸ್, ಐಪಿಎಸ್ ಪರೀಕ್ಷೆಯಲ್ಲಿ ಕರ್ನಾಟಕದ ನಂದಿನಿ ಮೊದಲ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಕೇಂದ್ರ ಲೋಕ ಸೇವಾ ಆಯೋಗವು 2016-17 ರಲ್ಲಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ನಡೆಸಿತ್ತು. ಇದೀಗ ವ್ಯಕ್ತಿತ್ವ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು ನಂದಿನಿ ರಾಜ್ಯಕ್ಕೆ ಹಿರಿಮೆ ತಂದಿದ್ದಾರೆ. 2014 ರಲ್ಲೂ ನಂದಿನಿ 849 ರ್ಯಾಂಕ್ ಪಡೆದಿದ್ದರು ಇದಕ್ಕೆ ತೃಪ್ತಿಯಾಗದ ಅವರು ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಮೊದಲ ಸ್ಥಾನ ಪಡೆದಿದ್ದಾರೆ.   


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ