ಮಡಿಕೇರಿಯಲ್ಲಿ ಸಿಸ್ಮೋಮೀಟರ್ ಅಳವಡಿಕೆ

sismometre installed in the kodagu

29-08-2018

ಮಡಿಕೇರಿ: ಮಡಿಕೇರಿಯಲ್ಲಿ ಸಂಭವಿಸಿರುವ ಪ್ರವಾಹ-ಭೂಕುಸಿತದ ಬಗ್ಗೆ ಈಗಾಗಲೇ ಅಧ್ಯಯನಗಳು ಪ್ರಾರಂಭವಾಗಿವೆ. ಯಾಕಿಷ್ಟು ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ? ಭೂ ಕುಸಿತಕ್ಕೂ 10 ದಿನಗಳ ಮುನ್ನ ಭೂಮಿ ಒಳಗಿಂದ ಬಂದ ಶಬ್ದಕ್ಕೂ-ಪ್ರವಾಹಕ್ಕೂ-ಭೂಕುಸಿತಕ್ಕೂ ಸಂಬಂಧವಿದೆಯಾ ಎಂಬ ಅಂಶಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇದರ ನಡುವೆ ಪ್ರವಾಹದ ನಂತರವೂ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸುತ್ತಿದೆ ಎನ್ನಲಾಗಿದೆ.

ಹೀಗಾಗಿ ಕೊಡಗಲ್ಲಿ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ವತಿಯಿಂದ ಸಿಸ್ಮೋಮೀಟರ್ (ಭೂಮಿಯಲ್ಲಾಗುವ ಸಂಚಲನವನ್ನು ಗುರುತಿಸುವ ಯಂತ್ರ) ಅಳವಡಿಸಲಾಗಿದೆ. ಇದರಿಂದ ಭೂಮಿಯ ಒಳಗಿನ ಚಲನವಲನಗಳನ್ನು ದಾಖಲು ಮಾಡಬಹುದಾಗಿದೆ. ಜಿಲ್ಲೆಯ ಜವಹರ್ ನವೋದಯ ವಿದ್ಯಾಲಯದಲ್ಲಿ ಉಪಕರಣ ಅಳವಡಿಸಿದ್ದಾರೆ. 6 ಲಕ್ಷ ರೂ. ವೆಚ್ಚದ ಈ ಉಪಕರಣ ರಾಜ್ಯದಲ್ಲಿ ಧಾರವಾಡ ಹೊರತುಪಡಿಸಿ ಈಗ ಕೊಡಗಿನಲ್ಲಿ ಅಳವಡಿಸಿರುವ ಎರಡನೇ ಜಿಲ್ಲೆಯಾಗಿದೆ. ಎನ್‌ಜಿಆರ್‌ಐ ಹಿರಿಯ ವಿಜ್ಞಾನಿ ರಾಘವನ್ ನೇತೃತ್ವದ ತಂಡ ಸಿಸ್ಮೋಗ್ರಾಫ್ ಯಂತ್ರ ಅಳವಡಿಸಿದೆ.


ಸಂಬಂಧಿತ ಟ್ಯಾಗ್ಗಳು

Seismographs National Geophysical ವಿಜ್ಞಾನಿ ರಿಸರ್ಚ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ