ತೆಲುಗಿನ ಖ್ಯಾತ ನಟ ಹರಿಕೃಷ್ಣ ಅಪಘಾತದಲ್ಲಿ ನಿಧನ

Tollywood actor harikrishna is no more

29-08-2018

ಹೈದರಾಬಾದ್: ತೆಲುಗಿನ ಖ್ಯಾತ ನಟ ಹಾಗು ಟಡಿಪಿ ಮುಖಂಡ ನಂದಮೂರಿ ಹರಿಕೃಷ್ಣ ನಿಧನರಾಗಿದ್ದಾರೆ. ಆಂಧ್ರ ಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ  ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ರಕ್ತ ಸ್ರಾವದಿಂದ ರಸ್ತೆ ಬದಿ ನರಳುತ್ತಿದ್ದ ಅವರನ್ನು ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವ ವೇಳೆಗೆ ಅವರು ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

ಅಭಿಮಾನಿಯೊಬ್ಬರ ಮದುಗೆಂದು ಹೈದರಾಬಾದ್ ನಿಂದ ಕಾರಿನಲ್ಲಿ ನೆಲ್ಲೂರಿಗೆ ಪ್ರಯಾಣಿಸುತ್ತಿದ್ದ ವೇಳೆ ನಾರ್ಕೆಟ್‌ಪಲ್ಲಿ–ಅಡ್ಡಂಕಿ ರಸ್ತೆಯ ಅಣ್ಣೆವರ್ತಿ ಸಮೀಪ ಅಪಘಾತ ಸಂಭವಿಸಿ ಕಾರು ಉರುಳಿಬಿದ್ದಿದೆ. ಇದರಿಂದ ತೀವ್ರ ಗಾಯಗಳಿಂದ ಹರಿಕೃಷ್ಣ ಮೃತಪಟ್ಟಿದ್ದಾರೆ. ದಿವಂಗತ ಖ್ಯಾತ ನಟ ಹಾಗು ಟಿಡಿಪಿ ಸಂಸ್ಥಾಪಕರಾದ ಎನ್‌.ಟಿ.ರಾಮರಾವ್ ಅವರ ಪುತ್ರ ಹರಿಕೃಷ್ಣ. ಹರಿಕೃಷ್ಣ ಜೂನಿಯರ್ ಎನ್.ಟಿ.ಆರ್ ಅವರ ತಂದೆ. ಇದೇ ರೀತಿ 2014ರಲ್ಲಿ ಹರಿಕೃಷ್ಣ ಅವರ ಮತ್ತೊಬ್ಬ ಮಗ ಜಾನಕಿರಾಮ್ ಸೂರ್ಯಂಪೇಟೆಯ ಮುನಗಾಲ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.


ಸಂಬಂಧಿತ ಟ್ಯಾಗ್ಗಳು

Harikrishana NTR ಟಿಡಿಪಿ ಅಭಿಮಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ