ಹಣಕ್ಕಾಗಿ ಜಗಳ: ಆಟೋ ಚಾಲಕನಿಗೆ ಚಾಕು ಇರಿತ

2 guys attacked with knife on a auto driver

28-08-2018

ಬೆಂಗಳೂರು: ಹಲಸೂರಿನಲ್ಲಿ ನಿನ್ನೆ ಮಧ್ಯರಾತ್ರಿ ಹಣಕಾಸಿನ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಆಟೋ ಚಾಲಕನಿಗೆ ಇಬ್ಬರು ಯುವಕರು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಾಯಾಗೊಂಡಿರುವ ಹಲಸೂರಿನ ಆಟೋ ಚಾಲಕ ಜಮೀರ್ ಪಾಷ (20) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಮೀರ್ ಪಾಷ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಬಂದ ಇಸ್ಮಾಯಿಲ್ ಹಾಗೂ ಮೌಸಿನ್ ಮನೆಗೆ ಬಂದು ಹಣ ಕೊಡುವಂತೆ ಕೇಳಿದ್ದಾರೆ. ಹಣ ಕೊಡಲು ನಿರಾಕರಿಸಿದ ಇಸ್ಮಾಯಿಲ್ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿರುವ ಹಲಸೂರು ಪೊಲೀಸರು ಇಸ್ಮಾಯಿಲ್ ಹಾಗೂ ಮೌಸಿನ್‍ಗಾಗಿ ಹುಡುಕಾಟ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

stabbed auto driver ಯುವಕರು ಹಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ