ಕುಖ್ಯಾತ ರೌಡಿ ಮಾಗಡಿ ರೋಡ್ ಕೃಷ್ಣ ಅರೆಸ್ಟ್

Rowdy magadi road krishna arrested

28-08-2018

ಬೆಂಗಳೂರು: ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಮಾಗಡಿ ರೋಡ್ ಕೃಷ್ಣನನ್ನು ಗುಂಡಾಕಾಯ್ದೆಯಡಿ ಬಂಧಿಸಲಾಗಿದೆ. ಕೆ.ಪಿ.ಅಗ್ರಹಾರದ ಕೃಷ್ಣ ಅಲಿಯಾಸ್ ಮಾಗಡಿ ರೋಡ್ ಕೃಷ್ಣ ಸುಮಾರು 12ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ಶಾಂತಿಭಂಗ ಕೃತ್ಯದಲ್ಲಿ ತೊಡಗಿದ್ದನು. ಕೃಷ್ಣನ ಅಪರಾಧ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಆರೋಪಿಯು ಕಪಿ ಅಗ್ರಹಾರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ.


ಸಂಬಂಧಿತ ಟ್ಯಾಗ್ಗಳು

Rowdy arrested ಗೂಂಡಾ ಕಾಯ್ದೆ ಅಗ್ರಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ