ಇನ್ಮುಂದೆ ಎಲ್ಲಾ ಜಿಲ್ಲೆಗಳಲ್ಲೂ ಜನತಾ ದರ್ಶನ: ಸಿಎಂ

Now janata darshan in every district: cm kumaraswamy ordered

28-08-2018

ಬೆಂಗಳೂರು: ತಮ್ಮ ನೆಚ್ಚಿನ ಜನತಾ ದರ್ಶನ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸಲು ಜಿಲ್ಲಾಧಿಕಾರಿಗಳಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆದೇಶಿಸಿದ್ದಾರೆ. ಜನತಾ ದರ್ಶನ ಸಿಎಂ ಕುಮಾರಸ್ವಾಮಿ ಅವರ ಪ್ರೀತಿಗೆ ಪಾತ್ರವಾದ ಕಾರ್ಯಕ್ರಮ. ಮೊದಲ ಬಾರಿಗೆ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಜನತಾ ದರ್ಶನ ಕಾರ್ಯಕ್ರಮ ಆರಂಭಿಸಿದ್ದರು.

ತಾವು ಹುಟ್ಟು ಹಾಕಿದ ಈ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಈಗ ಮತ್ತೆ ಮರುಜೀವ ಕೊಟ್ಟಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಜನತಾ ದರ್ಶನ ನಡೆಸಲು ಸಿಎಂ ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ. ಆ ಮೂಲಕ ನೇರ ಜನ ಸಂಪರ್ಕ ನಡೆಸಿ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಜನತಾ ದರ್ಶನದ ಸ್ಥಿತಿಗತಿ ವಿವರ: ಜನತಾ ದರ್ಶನದಡಿ ಈವರೆಗೆ ಒಟ್ಟು ಸುಮಾರು 14,977 ಅಹವಾಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಜನತಾ ದರ್ಶನದಡಿ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಅರ್ಜಿ ಸ್ವೀಕರಿಸಿದ ಪೈಕಿ 8,297 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಸುಮಾರು 1,194 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸುಮಾರು 5,486 ಅಹವಾಲು ಅರ್ಜಿ ಇತ್ಯರ್ಥವಾಗದೆ ಬಾಕಿ ಉಳಿದುಕೊಂಡಿವೆ.

ಎಲ್ಲಿಂದ ಹೆಚ್ಚು ಅರ್ಜಿ ಸ್ವೀಕಾರ?:  ಜನತಾ ದರ್ಶನದಡಿ ಅತಿ ಹೆಚ್ಚು ಅಹವಾಲು ಅರ್ಜಿ ಸ್ವೀಕಾರ ಮಾಡಿರುವುದು ಬೆಂಗಳೂರಿನಿಂದಲೇ. ಬೆಂಗಳೂರಿನಿಂದ ಸುಮಾರು 4,144 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಇನ್ನು ರಾಮನಗರದಿಂದ ಸುಮಾರು 1,065 ಅರ್ಜಿಗಳು ಸ್ವೀಕಾರವಾಗಿದ್ದು, ತುಮಕೂರಿನಿಂದ 1043 ಅರ್ಜಿಗಳು ಸ್ವೀಕಾರವಾಗಿವೆ. ಮೈಸೂರಿನಿಂದ 963 ಮತ್ತು ಮಂಡ್ಯದಿಂದ 867 ಅಹವಾಲು ಅರ್ಜಿ ಬಂದಿವೆ.

ಜಿಲ್ಲಾವಾರು ಅರ್ಜಿಗಳ ವಿವರ:  ಬೆಳಗಾವಿ-563, ದಾವಣಗೆರೆ-524, ಹಾಸನ-500, ಕೋಲಾರ-495, ಚಿತ್ರದುರ್ಗ-442, ಬಳ್ಳಾರಿ-407, ಗದಗ-316, ಚಿಕ್ಕಬಳ್ಳಾಪುರ-311,ರಾಯಚೂರು-294, ವಿಜಯಪುರ-293, ಬಾಗಲಕೋಟೆ-285, ಬೆಂ.ಗ್ರಾಮಾಂತರ-284,

ಕಲಬುರಗಿ-270, ಶಿವಮೊಗ್ಗ-264, ಧಾರವಾಡ-226, ಯಾದಗಿರಿ-203, ಹಾವೇರಿ-203, ಚಾಮರಾಜನಗರ-179, ಉತ್ತರ ಕನ್ನಡ-165, ಚಿಕ್ಕಮಗಳೂರು-147, ಕೊಪ್ಪಳ-146, ಬೀದರ್-139, ದ.ಕನ್ನಡ-108, ಕೊಡಗು-68, ಉಡುಪಿ-63 ಅರ್ಜಿಗಳು ಬಂದಿವೆ.

 


ಸಂಬಂಧಿತ ಟ್ಯಾಗ್ಗಳು

janata darshan H.D.Kumaraswamy ಅರ್ಜಿ ಅಹವಾಲು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ