ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದೇ ನನ್ನ ಮುಂದಿನ ಗುರಿ !

Kannada News

01-06-2017

ಬಳ್ಳಾರಿ:- ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸೂಕ್ತವಾಗಿ ‌ನಿಭಾಯಿಸುವೆ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ. ಇಂದು ತಮ್ಮ ವಿವಾಹದ 25 ನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಬರುಬವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ  ಪ್ರಶ್ನೆಯೇ ಇಲ್ಲ ಎಂದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣದಲ್ಲೂ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿ  ಅಧಿಕಾರಕ್ಕೆ ತರುತ್ತೇನೆ, ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದೇ ನನ್ನ ಮುಂದಿನ ಗುರಿ. ಅದೇ ರೀತಿ ಮೊದಿ ಅವರನ್ನು ಮತ್ತೊಮ್ಮೆ ೨೦೧೯ರಲ್ಲಿ ಪ್ರಧಾನಿ ಯನ್ನಾಗಿಸಲು ಶ್ರಮಿಸುವೆ ಎಂದು ಹೇಳಿದರು. ಮದುವೆಯ ೨೫ನೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಬಳ್ಳಾರಿಗೆ ಬಂದಿದ್ದೇನೆ. ಮೂರು ದಿನ ಬಳ್ಳಾರಿಯಲ್ಲಿ ಇರಲು ಕೋರ್ಟ್ ಅನುಮತಿ ನೀಡಿದೆ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ