ದೆಹಲಿಯಲ್ಲಿ ಭಾರೀ ಮಳೆ: ಸಿಎಂ ವಿರದ್ಧ ಟ್ಟೀಟರ್ ನಲ್ಲಿ ಆಕ್ರೋಶ

Heavy Rainfall in Delhi: Outrage at twitter against arvind kejriwal

28-08-2018

ನವದೆಹಲಿ: ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ, ಆರ್‌.ಕೆ.ಪುರಂ, ತೀನ್ ಮೂರ್ತಿ ಭವನ್, ಹರಿಯಾಣದ ಗುರುಗ್ರಾಮ ಸುತ್ತಮುತ್ತ ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ಬೆಳಿಗ್ಗೆಯೇ ಧಾರಾಕಾರ ಮಳೆಯಾಗಿದ್ದು ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ಹೋಗುವವರಿಗೆ ತೊಂದರೆಯಾಗಿದೆ. ಮಳೆಯಿಂದ ಟ್ರಾಫಿಕ್ ಕೂಡ ಹೆಚ್ಚಾಗಿತ್ತು. ಇನ್ನು ಮಳೆಯಿಂದ ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡಿದ್ದು, ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದ್ದನ್ನು ಕಂಡು ಸಾರ್ವಜನಿಕರು ಟ್ಟೀಟರ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲೇ ಈ ರೀತಿ ಅವ್ಯವಸ್ಥೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಮಳೆಯಿಂದಾದ ಅನಾಹುತಗಳನ್ನು ಟ್ಟೀಟರ್ನಲ್ಲಿ ಹಂಚಿಕೊಂಡು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇರಳಕ್ಕೆ ಸಹಾಯ ಮಾಡಿ ಎಂದು ಕೇಳುವ ಸಿಎಂ ಕೇಜ್ರಿವಾಲ್, ಕೇವಲ ಎರಡು ಗಂಟೆ ಸುರಿದ ಮಳೆಗೆ ನವದೆಹಲಿ ಈ ರೀತಿಯಾಗಿದೆ ತನ್ನ ರಾಜ್ಯ ಕೂಡ ಅದೇ ರೀತಿ ಆಗಬಹುದು ಟ್ಟೀಟರ್ ನಲ್ಲೇ ಎಚ್ಚರಿಸಿದ್ದಾರೆ.

ಇನ್ನು ಹವಾನಮಾನ ಇಲಾಖೆ ಹರಿಯಾಣ, ಚಂಡೀಗಡ, ಉತ್ತರಪ್ರದೇಶ, ನವದೆಹಲಿ, ಮಧ್ಯಪ್ರದೇಶ, ಸಿಕ್ಕಿಂ, ಮಣಿಪುರ, ನಾಗಲ್ಯಾಂಡ್, ಮಿಜೋರಾಮ್, ಗೋವಾ, ತೆಲಂಗಾಣ,  ವಿದರ್ಭ,ಪಶ್ಚಿಮ ಬಂಗಾಳ, ಕರಾವಳಿ ಕರ್ನಾಟಕ ರಾಜ್ಯಗಳಲ್ಲಿ ಮಳೆಯಾಗಲಿದೆ, ಎಚ್ಚರದಿಂದಿರಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಿದೆ.


ಸಂಬಂಧಿತ ಟ್ಯಾಗ್ಗಳು

Arvind Kejriwal New Delhi ಹವಾನಮಾನ ಇಲಾಖೆ ಹರಿಯಾಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ