ಬಿಜೆಪಿ ಹೇಳಿಕೆಗಳಿಗೆ ಡಿಸಿಎಂ ಪರಮೇಶ್ವರ್ ತಿರುಗೇಟು

Coalition government is stable said DCM parameshwar

28-08-2018

ಬೆಂಗಳೂರು: ಮೈತ್ರಿ ಸರ್ಕಾರ ಸುಭದ್ರವಾಗಿಲ್ಲ ಎಂಬ ಬಿಜೆಪಿ ಹೇಳಿಕೆಗಳಿಗೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ‘ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಆತಂಕ ಬೇಡ’ ಎಂದು ಹೇಳಿದ್ದಾರೆ.

ಈ ಕುರಿತು ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಸುಭದ್ರವಾಗಿಲ್ಲ ಎಂದು ಕೆಲವರು ಮಾತನಾಡಿದ್ದರ ಬಗ್ಗೆ ನೋಡಿದ್ದೇನೆ. ಅಂತಹ ವಿಚಾರಗಳು ಇದ್ದೇ ಇರ್ತಾವೆ. ಸರ್ಕಾರದ ಪತನಕ್ಕೆ ಬಿಎಸ್ವೈ ಡೆಡ್ ಲೈನ್ ವಿಚಾರವಾಗಿ ಪ್ರತಿಕ್ರಿಯಿಸಿ ‘ನೋಡೋಣ ಶ್ರಾವಣ, ಬಳಿಕ ಭಾದ್ರಪದ, ನಂತರ ಕಾರ್ತಿಕ ಕೂಡ ಬರುತ್ತೆ' ಎಂದು ವ್ಯಂಗ್ಯವಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಪಕ್ಷ ಮತ್ತು ನಾಯಕರನ್ನ ಸಜ್ಜುಗೊಳಿಸುವುದಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಪಕ್ಷದ ಮುಖಂಡರೊಂದಿಗೆ, ಮುಂದಿನ ತಿಂಗಳ ಸೆಪ್ಟೆಂಬರ್ 1 ಮತ್ತು 2 ರಂದು ಸಭೆ ನಡೆಸಲಿದ್ದಾರೆ. ಸಚಿವರ ಮೌಲ್ಯಮಾಪನ ಈಗಾಗಲೇ ಆಂತರಿಕವಾಗಿ ನಡಿತಿದೆ ಎಂದು ಕೂಡ ಹೇಳಿದ್ದಾರೆ. ಸಮನ್ವಯ ಸಮಿತಿ ಸಭೆ ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ ನಡೆಸಬೇಕು ಅನ್ನೋ ಬಗ್ಗೆಯೂ ಚಿಂತನೆ ಇದೆ. ನೋಡೋಣ..ಎಂದಿದ್ದಾರೆ ಡಿಸಿಎಂ.


ಸಂಬಂಧಿತ ಟ್ಯಾಗ್ಗಳು

G.Parameshwara K. C. Venugopal ಬಿಎಸ್ ವೈ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ