ತನ್ನ ಪತ್ನಿ ಮೇಲೆಯೇ ಸುಳ್ಳು ದೂರು: ಪತಿ ಬಂಧನ

police arrested a man for filed a false complaint

27-08-2018

ಬೆಂಗಳೂರು: ಪ್ರಿಯಕರನ ಜೊತೆ ಹೋಗಿ ವಾಸಿಸುತ್ತಿದ್ದ ಪತ್ನಿಯನ್ನು ಅಪಹರಿಸಲಾಗಿದೆ ಎಂದು ಸುಳ್ಳು ದೂರು ನೀಡಿದ್ದ ಪತಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಹುಸೇನ್ ಪೊಲೀಸ್ ಠಾಣೆಗೆ ದೂರು ನೀಡಿ ಬಂಧಿತನಾಗಿದ್ದಾನೆ. ನನ್ನ ಪತ್ನಿ ಶಬೀನಾ (ಹೆಸರು ಬದಲಿಸಲಾಗಿದೆ)ಳನ್ನು ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಣ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಕೊಲೆ ಮಾಡುತ್ತಾರೆ ಎಂದು ಹುಸೇನ್ ದೂರು ನೀಡಿದ್ದನು. ದೂರು ಸ್ವೀಕರಿಸಿದ ಬಳಿಕ ಪತಿ ಹುಸೇನ್ ಅಸಲಿಯತ್ತು ಅನಾವರಣಗೊಂಡಿದೆ.

ಶಬೀನಾ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿ ಅವನೊಂದಿಗೆ ಇರುವುದಾಗಿ ಮನೆ ಬಿಟ್ಟು ಹೋಗಿದ್ದಳು. ಅವನೊಂದಿಗೆ ಪತ್ನಿ ನೆಮ್ಮದಿಯಾಗಿ ಇರುತ್ತಾಳೆ, ಎಂದು ಶಬೀನಾ ಪ್ರೀಯಕರನನ್ನು ಜೈಲಿಗೆ ಕಳುಹಿಸಲು ಹುಸೇನ್ ಸ್ಕೆಚ್ ಹಾಕಿದ್ದನು. ಹೀಗಾಗಿ ಬಾಯ್ ಫ್ರೆಂಡ್ ಜೈಲಿಗೆ ಹೋದರೆ ಪತ್ನಿ ಮತ್ತೆ ವಾಪಸ್ ಬರುತ್ತಾಳೆ ಎಂದು ಹುಸೇನ್ ದೂರು ನೀಡಿದ್ದನು.

ಈ ಬಗ್ಗೆ ತನಿಖೆ ಮಾಡಿದಾಗ ಸತ್ಯಾಂಶ ಹೊರ ಬಂದಿದ್ದು, ದೂರು ನೀಡಿದ ಹುಸೇನ್‍ ನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ಯ ಗೊತ್ತಿದ್ದರೂ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಆತನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

wife Lover ಪೊಲೀಸ್ ಪ್ರಿಯಕರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ